ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 2:
ಪ್ರಾಥಮಿಕ ಶಾಲಾ ಮಕ್ಕಳಿಗೆ 21 ದಿನಗಳ ಓದುವ ಅಭಿಯಾನದಲ್ಲಿ ಈದ್ ಮಿಲಾದ್ ಹಬ್ಬ ಪ್ರಸ್ತಾಪ ಕೈ ಬಿಡುವಂತೆ ಸರ್ಕಾರಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಒಂದೇ ಕೋಮಿನ ಹಬ್ಬದ ಬಗ್ಗೆ ಓದಿ ಎಂದು ಮಕ್ಕಳಿಗೆ ಹೇಳುವುದು ತಪ್ಪು ಎಂದು ಹೇಳಿದರು.
ಸರ್ಕಾರ ತಕ್ಷಣವೇ ಓದು ಅಭಿಯಾನದಿಂದ ಈದ್ ಮಿಲಾದ್ ಹಬ್ಬದ ವಿಷಯ ತೆಗೆದು ಹಾಕುವಂತೆ ಒತ್ತಾಯ ಮಾಡಿದರು.
ಹಿಂದೂ ಹಬ್ಬಗಳಾದ ದೀಪಾವಳಿ, ದಸರೆ,
ಕ್ರಿಶ್ಚಿಯನ್, ಬೌದ್ಧ, ಜೈನ ಧರ್ಮದ ಹಬ್ಬದ ಬಗ್ಗೆಯೂ ಪ್ರಸ್ತಾಪ ಇಲ್ಲ. ಆದರೆ ಮುಸ್ಲಿಂ ಧರ್ಮದ ಈದ್ ಮಿಲಾದ್ ಬಗ್ಗೆ ಓದುವ ವಿಷಯ ಇದೆ. ಇದು ಕಾಂಗ್ರೆಸ್ ಸರ್ಕಾರದ ಮುಸ್ಲಿಂ ತುಷ್ಟೀಕರಣವಾಗಿದೆ. ಇದು
ಮುಸ್ಲಿಂ ಪರ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಟ್ವಿಟ್ ಸಹ ಮಾಡಿದ್ದ ಶಾಸಕ
ತಕ್ಷಣವೇ ಈದ್ ಮಿಲಾದ್ ಹಬ್ಬದ ವಿಷಯವನ್ನು ಲಿಸ್ಟ್ ನಿಂದ ತೆಗೆದುಹಾಕುವಂತೆ ಒತ್ತಾಯ ಮಾಡಿದರು.
ರಾಜ್ಯ ಸರಕಾರದಿಂದ ಹೆಲಿಕಾಪ್ಟರ್ ಹಾಗೂ ಜೆಟ್ ವಿಮಾನ ಖರೀದಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ, ಸಿಎಂ ಶೋಕಿಗಾಗಿ ವಿಮಾನ ಖರೀದಿಸುತ್ತಿದ್ದಾರೆ. ರಾಜ್ಯದಲ್ಲಿ ಸಾಕಷ್ಟು ರೈಲ್ವೆ ವ್ಯವಸ್ಥೆಯಿದೆ. ಮುಖ್ಯಮಂತ್ರಿ ರೈಲಿನಲ್ಲಿ ಓಡಾಡಬೇಕು. ಸಾರ್ವಜನಿಕರ ಹಣ ದುಂದು ವೆಚ್ಚ ಮಾಡಬಾರದು. ಸಿಎಂ ಶೋಕಿ ಬಿಡಬೇಕು ಎಂದರು.
ವಿಜಯಪುರ ಜಿಲ್ಲೆಯಲ್ಲಿ
ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಸ್ಥಾಪನೆ ವಿಚಾರವಾಗಿ ಪ್ರತಿಕ್ರಿಯೆ, ಪಿಪಿಪಿ ಮಾದರಿಯ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕೆಲವರು ವಿರೋಧಿಸುತ್ತಿದ್ದಾರೆ. ಇದು ಸರಿಯಲ್ಲ ಎಂದರು.
ಸರ್ಕಾರದ ಬಳಿ ಹಣವಿಲ್ಲ ಎಂದು ಪಿಪಿಪಿ ಮಾದರಿ ಮಾಡುತ್ತೇವೆ ಎಂದಿದ್ದಾರೆ. ಅದರಲ್ಲಿ ತಪ್ಪಿಲ್ಲ ಎಂದು ಹೇಳಿದರು.
ಇದೇ ಸಚಿವ ಶಿವಾನಂದ ಪಾಟೀಲ ಹಿಂದೆ ಆರೋಗ್ಯ ಸಚಿವರಿದ್ದಾಗ ಯಾಕೆ ಸರ್ಕಾರಿ ಮೆಡಿಕಲ್ ಕಾಲೇಜು ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.
ಸಾರ್ವಜನಿಕವಾಗಿ ಶಿವಾನಂದ ಪಾಟೀಲ ಕೊಡುಗೆ ಏನಿಲ್ಲ. ಸಚಿವ ಶಿವಾನಂದ ಪಾಟೀಲ ಅವರು ಆರೋಗ್ಯ ಸಚಿವರಾಗಿದ್ದಾಗ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜ ಮಾಡಿದ್ದರೆ ಆಗುತ್ತಿತ್ತು. ಅವರು ಮಾಡಲಿಲ್ಲ ಎಂದು ದೂರಿದರು.
ಇಲ್ಲಿ ಸರ್ಕಾರಿ ಅಥವಾ ಪ್ರೈವೇಟ್ ಮೆಡಿಕಲ್ ಆದರೆ ಸಾವಿರಾರು ನಿರುದ್ಯೋಗಿ ಯುವಕರಿಗೆ ನೌಕರಿ ಸಿಗತ್ತದೆ ಎಂದು ತಿಳಿಸಿದರು.
ಪಿಪಿಪಿ ನಾನೇ ತಗೆದುಕೊಳ್ಳಬೇಕು ಎಂಬ ಹುಚ್ವು ನನಗಿಲ್ಲ. ನನಗೆ ಬೇಕಿದ್ದರೆ ಪ್ರೈವೇಟ್ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ತಾಕತ್ತಿದೆ ಎಂದರು.
ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲೂ ಸಹಿತ ದುಡ್ಡು ಕಟ್ಟಬೇಕು. ಮೆರಿಟ್ ಇದ್ದವರಿಗೆ ಎಲ್ಲೂ ತೊಂದರೆ ಆಗಲ್ಲ ಎಂದರು.


