ಸಪ್ತಸಾಗರ ವಾರ್ತೆ , ವಿಜಯಪುರ, ಅ. 28:
ಬಿ.ಎಲ್.ಡಿ.ಇ. ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳಿಗೆ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಪ್ರಸಕ್ತ ವರ್ಷದ ಸಂಶೋಧನೆ ಅನುದಾನ ಮಂಜೂರಾಗಿದೆ.
ವಿದ್ಯಾರ್ಥಿಗಳಾದ ಅಂಕಿತ ಯಾಳವಾರ, ಪವನ ತೇಲಿ, ಶ್ರದ್ಧಾ ಕರ್ಕಬ್ಬಿ ಹಾಗೂ ಸಿಂಚನ ಕೆ. ಅವರಿಗೆ ಅವರು ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸತೀಶ ಪಾಟೀಲ, ಡಾ. ಮಲ್ಲಮ್ಮ ಬಿರಾದಾರ, ಡಾ. ಸುಮಾ ಕಗ್ಗೋಡ ಹಾಗೂ ಡಾ. ಗುರುದೇವಿ ಪಾಟೀಲ ಇವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಲಿದ್ದಾರೆ.
ಅನುದಾನ ಪಡೆದ ವಿದ್ಯಾರ್ಥಿಗಳಿಗೆ ಬಿ. ಎಲ್. ಡಿ. ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ ಪಾಟೀಲ, ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ನಾಲ್ವರು ವಿದ್ಯಾರ್ಥಿಗಳಿಗೆ ಸಂಶೋಧನೆ ಅನುದಾನ ಮಂಜೂರು


