ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 15:
ಜಿಲ್ಲೆಯ ರಾಜ್ಯ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾಧ್ಯಕ್ಷರು ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಸೈಂಟಿಸ್ಟ್ ಇಂಡಿಯಾದ ನ್ಯಾಷನಲ್ ಡೈರೆಕ್ಟರ್ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಎಸ್.ವಿ. ಬುರ್ಲಿ ಇವರಿಗೆ ಹಾಗೂ ಜಯಶ್ರೀ ಬುರ್ಲಿ ಜೀವಶಾಸ್ತ್ರಉಪನ್ಯಾಸಕಿ ಇವರಿಗೆ ಇಂಡೋ–ನಾಮ್ ಸೈಂಟಿಫಿಕ್ ಸಮ್ಮಿತ್ -26 ಫೆಲೋ ಶಿಪ್ ಪ್ರಶಸ್ತಿ ಘೋಷಿಸಲಾಗಿದೆ.
ಮೇ 17 ರಿಂದ22 ರವರೆಗೆ ವಿಯೆಟ್ನಾಂನ ಡನಾಂಗ್ ದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ತಿಳಿಸಿದ್ದಾರೆ.
ಶ್ರೀ ಎಸ್.ವಿ.ಬುರ್ಲಿ ಇವರ ವೈಜ್ಞಾನಿಕ ಹಾಗೂ ಗಣಿತದ ಹಲವಾರು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ 400ಕ್ಕೂ ಹೆಚ್ಚು ವೈಜ್ಞಾನಿಕ ಕಾರ್ಯಕ್ರಮ ಹಾಗೂ ಕಾರ್ಯಾಗಾರ ಮಾಡಿದ್ದಾರೆ.
ಇವರಿಗೆ ರಾಜ್ಯ ಉಪಾಧ್ಯಕ್ಷೆ ಉಷಾದೇವಿ ಹಿರೇಮಠ, ಗೌರವಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಿಸಾಳೆ, ಉಪಾಧ್ಯಕ್ಷ ಬಿ.ಎ.ಆಸಂಗಿ, ಬಿ.ಆಯ್.ಪರಂಡಿ, ಖಜಾಂಚಿ ಮಹಾದೇವ ದೇವರ, ಜಿಲ್ಲಾ ಸಂಚಾಲಕ ರಾಜಕುಮಾರ ಅರಗೆ, ನಿರ್ದೇಶಕ ಬಸವರಾಜ ಚೌಧರಿ, ಬಸವನ ಬಾಗೇವಾಡಿ ತಾಲ್ಲೂಕಾ ಅಧ್ಯಕ್ಷ ಧರು ಎಸ್.ಕೆ., ಸಿಂದಗಿ ತಾಲ್ಲೂಕಾ ಅಧ್ಯಕ್ಷೆ ಜ್ಯೋತಿ ದೇಸಾಯಿ, ತಿಕೋಟಾ ತಾಲ್ಲೂಕಾ ಅಧ್ಯಕ್ಷ ಬೀರಪ್ಪ ಖಂಡೆಕಾರ, ವಿಜಯಪುರ ಗ್ರಾಮೀಣ ಅಧ್ಯಕ್ಷ ರಾಜಕುಮಾರ ಚವ್ಹಾಣ, ನಿರ್ದೇಶಕಿ ಸುಮಾ ಚೌಧರಿ ಹಾಗೂ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಎಸ್.ವಿ. ಬುರ್ಲಿ ಹಾಗೂ ಜಯಶ್ರೀ ಬುರ್ಲಿ ಇವರಿಗೆ ಜೀವಮಾನದ ಅಂತರಾಷ್ಟ್ರೀಯ ಫೆಲೋಷಿಪ್-26 ಪ್ರಶಸ್ತಿ


