ವಿಜಯಪುರದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಆಡಿಷನ್ ಫೆಬ್ರವರಿ 21 ರಂದು

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 18:
ಕನ್ನಡದ ಟಿ.ವಿ ಇತಿಹಾಸದಲ್ಲಿ ಅತೀ ಹೆಚ್ಚು ಜನಮನ್ನಣೆ ಗಳಿಸಿದ ಸಿಂಗಿಂಗ್ ರಿಯಾಲಿಟಿ ಶೋ ಅಂದ್ರೆ ಅದು ಸ ರಿ ಗ ಮ ಪ. ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ‘ಸ ರಿ ಗ ಮ ಪ’ ಈಗ ತನ್ನ ಹೊಸ ಆವೃತ್ತಿಯೊಂದಿಗೆ ಕನ್ನಡಿಗರ ಮುಂದೆ ಬರಲು ಸಜ್ಜಾಗಿದೆ.
ಈ ಬಾರಿಯ ಸ ರಿ ಗ ಮ ಪ ಮಕ್ಕಳಿಗಾಗಿ ನಡೆಯಲಿದ್ದು 3 ವರುಷದಿಂದ 15 ವರುಷದ ಒಳಗಿನ ಮಕ್ಕಳು ಈ ಆವೃತ್ತಿಯಲ್ಲಿ ಭಾಗವಹಿಸಬಹುದಾಗಿದೆ. ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಆಡಿಷನ್ ಗಳು ಕರ್ನಾಟಕದ 31 ಜಿಲ್ಲೆಗಳಲ್ಲಿ ನಡೆಯಲಿದೆ. ಚೆನ್ನಾಗಿ ಹಾಡುವ ಮಕ್ಕಳು 3 ರಿಂದ 15 ವರ್ಷದ ಒಳಗಿದ್ದರೆ 3 ವಿಭಿನ್ನವಾದ ಹಾಡುಗಳನ್ನು ಕಲಿತು ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಹಾಗೆಯೇ ಈ ಆಡಿಷನ್ ನಲ್ಲಿ ಭಾಗವಹಿಸಲು ಪಾಸ್ಪೋರ್ಟ್ ಸೈಜ್ ಫೋಟೋ, ಅಡ್ರೆಸ್ ಪ್ರೂಫ್ ಜೆರಾಕ್ಸ್ ಕಡ್ಡಾಯ.

ಫೆ.21 ಶನಿವಾರದಂದು,ಬೆಳಿಗ್ಗೆ 9 ಗಂಟೆಗೆ,ಶ್ರೀ ರವೀಂದ್ರನಾಥ್ ಟಾಗೋರ್ ಸ್ಕೂಲ್ ಅಂಡ್ ಕಾಲೇಜು,ಶಕ್ತಿನಗರ,ವಿಜಯಪುರ ಇಲ್ಲಿ ಆಡಿಷನ್ ನಡೆಯಲಿದೆ. ಸ್ಪರ್ದಿಗಳು ಯಾವುದೇ ಕರಾಓಕೆ ಬಳಸುವಂತಿಲ್ಲ.ಹಾಡೋ ಮಕ್ಕಳ ದನಿಗೆ ಜೀಕನ್ನಡ ವೇದಿಕೆಯ ಕೊಡುಗೆ, ಮತ್ಯಾಕೆ ತಡ, ಆಡಿಷನ್ ನಲ್ಲಿ ಭಾಗವಹಿಸಿ, ಮುಂದಿನ ಸುತ್ತಿಗೆ ಆಯ್ಕೆಯಾಗಿ.ಜೀ಼ಕನ್ನಡ ವಾಹಿನಿಯಲ್ಲಿ ಆಡಿಷನ್ ಗಳಿಗೆ ಯಾವುದೇ ರೀತಿಯ ಶುಲ್ಕ ಕಟ್ಟುವಂತಿಲ್ಲ,ವಾಹಿನಿಯ ಹೆಸರಿನಲ್ಲಿ ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಾಹಿನಿಯು ತಿಳಿಸಿದೆ.

Share this