ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 11:
ನಗರದ ಎಂ. ಎಸ್. ಜೆ. ಜೆ. ವಿ ಸಂಸ್ಥೆಯ ದಶಮಾನತ್ಸವದ ಅಂಗವಾಗಿ ನಾಲ್ಕು ಜನ ಮಹಿಳಾ ಸಾಧಕರಿಗೆ, ವಿಶ್ವ ಮಹಿಳಾ ದಿನಾಚರಣೆ 2026ರ
” ಸಬಲೆ ” ಪ್ರಶಸ್ತಿ ಹಾಗೂ ಕಸಗೂಡಿಸುವ ಪ್ರಾಮಾಣಿಕ ಮಹಿಳಾ ಪೌರಾಕಾರ್ಮಿಕರಿಗೆ, ಸ್ವಸಹಾಯ ಸಂಘದಿಂದ ಯಶಸ್ವಿ ಬದುಕು ಟ್ಟಿಕೊಂಡ ಮಹಿಳೆಯರನ್ನು ಸನ್ಮಾನಿಸುವದರೊಂದಿಗೆ, ನಾಟ್ಯ ಗಾಯನ ಸಾಂಸ್ಕೃತಿಕ ವೈಭವದ ಕಾರ್ಯಕ್ರಮವನ್ನು ಮಾ. 13ರಂದು ನಗರದ ಕಂದಗಲ್ಲ ಹನುಮಂತರಾಯ ರಂಗಮದಿರದಲ್ಲಿ ಬೆಳಿಗ್ಗೆ 10ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರೀತಿ ಮೋಹನ ಪತ್ತಾರ ತಿಳಿಸಿದರು. ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
2016ರಲ್ಲಿ ಪ್ರಾರಂಭವಾದ ಎಂ. ಎಸ್. ಜೆ. ಜೆ. ವಿ ಸಂಸ್ಥೆಯು 10ವರ್ಷಗಳ ಕಾಲ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ತಿ ಕವಾಗಿ ಹತ್ತು ಹಲವಾರು ಕಾರ್ಯಗಳನ್ನು ಮಾಡುವದರೊಂದಿಗೆ ಕರೋಣಾ ಸಂದರ್ಭದಲ್ಲಿ ಅನಾಥರಿಗೆ ಅನ್ನ ನೀರು ನೀಡಿ, ಅನಾಥವಾಗಿ ಬಿದ್ದ 50ಕ್ಕೂ ಹೆಚ್ಚು ಶವಗಳ ಶವಸಂಸ್ಕಾರ ಮಾಡಿದ ಸಮಾಜಪರ ಕಾರ್ಯಕೈಕೊಂಡ ಸಂಸ್ಥೆಗೆ 10 ವರ್ಷ ತುಂಬಿದ ಸಂಭ್ರಮವನ್ನು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಕ. ರಾ. ಅ. ಮ. ವಿ. ವಿಯ ಕುಲಪತಿಗಳಾದ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ, ನಾಟ್ಯ ಕಲಾವಿದೆ ವಿದುಷಿ ದೀಕ್ಷಾ ಭೀಸೆ, ಅನುರಾಧಾ ಜೆ. ಸುತಾರ ಇವರಿಗೆ “ಸಬಲೆ” ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆ ಪ್ರೀತಿ ಪತ್ತಾರ ವಹಿಸಲಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಮತ್ತು ರೂಪಾ ಮಹೇಶ ಪೋತದಾರ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ. ಕೆ. ಚವ್ಹಾಣ, ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ, ಡಾ. ಶ್ವೇತಾ ಶರಣ್, ವಿಶೇಷ ಆವ್ಹಾನಿತಾರಾಗಿ ಭೂ ಮಾಪನ ಇಲಾಖೆಯ ಡಿ. ಡಿ. ಎಲ್. ಆರ್. ಮಹಾoತೇಶ ಮುಳಗುಂದ, ಅಜೀತ ಎನ್. ಮುತ್ತಿನ, ಪ್ರಶಾಂತ ಹಾಜರೆ, ಹಿರಿಯ ಆಪ್ತ ಸಮಾಲೋಚಕ ರವಿಕಿತ್ತೂರ, ಆನಂದ ಸವಣೂರ, ಗೌರವ ಉಪಸ್ಥಿತಿಯಲ್ಲಿ ಪ್ರೊ. ಗಂಗಾಧರ ಸೋನಾರ, ಮುಖ್ಯಸ್ಥರು ಸಮಾಜಕಾರ್ಯ ವಿಭಾಗ ಕ. ರಾ. ಅ. ಮ. ವಿ.ವಿ ವಿಜಯಪುರ, ಪ್ರೊ. ಜ್ಯೋತಿ ಅ. ಉಪಾಧ್ಯಯ ಪ್ರಾಧ್ಯಾಪಕರು ಕ. ರಾ. ಮ. ವಿ. ವಿ ವಿಜಯಪುರರವರು ಕಾರ್ಯಕ್ರದಲ್ಲಿ ಭಾಗವಹಿಸಲಿದ್ದು 30ಜನ ಕಸಗೂಡಿಸುವ ಮಹಾನಗರ ಪಾಲಿಕೆ ಮಹಿಳಾ ಪೌರ ಕಾರ್ಮಿಕರಿಗೆ, ಸ್ವಸಹಾಯ ಸಂಘದಿಂದ ಬದುಕಿನಲ್ಲಿ ಯಶಸ್ವಿ ಕಂಡ ಸ್ವಾವಲಂಬಿ ಮಹಿಳೆಯರಿಗೆ ಸನ್ಮಾನಿಸುವದರೊಂದಿಗೆ, ಮುತ್ತುರಾಜ್ ಮದಾನಬಾವಿ, ಪಾಂಡುರಂಗ ಕುಲಕರ್ಣಿಯವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿಜಯಪುರದ ಸ್ವಯಂಭೂ ಆರ್ಟ್ ಫೌಂಡೇಶನ್ ಮಕ್ಕಳಿಂದ, ಅನುರಾಧ ಸುತಾರ ಶಿಷ್ಯ ಬಳಗದಿಂದ ಹಾಗೂ ಮಾಸ್ಟರ್ ಸೂರ್ಯವಂಶಿ ತಂಡದವರಿಂದ ಸಾಂಸ್ಕೃತಿಕ ವೈಭವ ನಡೆಯುವುದೆಂದು ಪತ್ರಿಕಾಗೋಷ್ಟಿಯಲ್ಲಿ ವಿವರಿಸಿದರು. ಸಂಸ್ಥೆಯ ಕಾರ್ಯದರ್ಶಿ ಮೋಹನ ಕಟ್ಟಿಮನಿ, ಸದಸ್ಯರಾದ ಮಹಾನಂದಾ ಪೋದ್ದಾರ, ಅರ್ಚನಾ ಪಾಠಕ, ಜ್ಯೋತಿ ವಾಲಿ, ದೀಪಾ ಹಂಜಗಿ, ವಿಜಯಲಕ್ಷ್ಮಿ ಗೌಡರ ಮತ್ತು ಜಯಶ್ರೀ ಅಂಗಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಪ್ರೊ. ವಿಜಯಾ ಕೋರಿಶೆಟ್ಟಿಯವರಿಗೆ “ಸಬಲೆ ” ಪ್ರಶಸ್ತಿ


