ಸಂತ ರವಿದಾಸರ ತತ್ತ್ವಗಳು ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿದೀಪ: ಸಂಸದ ಗೋವಿಂದ ಕಾರಜೋಳ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 2:
ಸಂತ ರವಿದಾಸರು ಕಂಡ ಜಾತಿರಹಿತ ಮತ್ತು ಸಮಾನತೆಯ ಸಮಾಜದ ಕನಸನ್ನು ನನಸಾಗಿಸಲು ನಾವೆಲ್ಲರೂ ಬದ್ಧರಾಗಬೇಕಿದೆ ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಅವರು ಕರೆ ನೀಡಿದರು.
ನಗರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ‘ಸಂತ ಶಿರೋಮಣಿ ಶ್ರೀ ರವಿದಾಸರ ಜಯಂತಿ’ ಕಾರ್ಯಕ್ರಮದಲ್ಲಿ ರವಿದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಭಾರತದ ಭಕ್ತಿ ಪರಂಪರೆಯಲ್ಲಿ ಸಂತ ರವಿದಾಸರ ಸ್ಥಾನ ಹಿರಿದಾದುದು. 15ನೇ ಶತಮಾನದಲ್ಲಿಯೇ ಅವರು ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದ್ದರು. ‘ಮನಸ್ಸು ಶುದ್ಧವಾಗಿದ್ದರೆ ಅದೇ ತೀರ್ಥಕ್ಷೇತ್ರ’ ಎಂಬ ಅವರ ಸಂದೇಶ ಇಂದಿನ ಸಮಾಜಕ್ಕೂ ದಾರಿದೀಪವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಪರಿಕಲ್ಪನೆಯು ರವಿದಾಸರ ತತ್ತ್ವಗಳಿಗೆ ಹತ್ತಿರವಾಗಿದ್ದು, ಅಂತಃಕರಣದ ಮೂಲಕ ದೀನದಲಿತರ ಏಳಿಗೆಗೆ ಶ್ರಮಿಸುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಅರುಣ ಶಾಹಪುರ, ವಿಜುಗೌಡ ಪಾಟೀಲ, ಉಮೇಶ ಕಾರಜೋಳ, ಗೋಪಾಲ ಘಟಕಾಂಬಳೆ, ಮಲ್ಲಿಕಾರ್ಜುನ ಜೋಗೂರ, ಮಹೇಂದ್ರಕುಮಾರ ನಾಯಕ, ಸ್ವಪ್ನಾ ಕಣಮುಚನಾಳ, ಮಂಜುನಾಥ ಮೀಸೆ, ಸಂದೀಪ ಪಾಟೀಲ, ಸಾಬು ಮಾಶ್ಯಾಳ, ಈರಣ್ಣ ರಾವೂರ, ವಿಜು ಜೋಶಿ, ಭರತ ಕೋಳಿ, ವಿನೋದ ಕೊಳೂರಗಿ, ಸುನೀಲ ಜೈನಾಪೂರ, ಅನಸೂಯಾ ಮದರಿ, ದಿಶಾ ಚಿಕ್ಕನಾದ, ಸಾಗರ ಶೇರಖಾನೆ, ಸಿದ್ದು ಮಖಣಾಪೂರ, ಲಕ್ಷ್ಮಣ ಕಲಾದಗಿ ಹಾಗೂ ಕಾರ್ಯಕರ್ತರು ಹಾಜರಿದ್ದರು.

Share this