ಸಂಕ್ರಮಣ ಜಾತ್ರೆ: ಅಕ್ಷತಾರ್ಪಣೆ-ಬೋಗಿ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 13: ನಗರದ ಆರಾಧ್ಯ ದೈವ ಶ್ರೀ ಸಿದ್ದೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವದ ೩ನೇ ದಿನವಾದ ಮಂಗಳವಾರ ವಿವಿಧ ಪುಷ್ಪಗಳಿಂದ ಅಲಂಕೃತ ಸಪ್ತ ನಂದಿಕೋಲುಗಳು, ಶ್ವೇತ ವಸ್ತ್ರಧಾರಿ ಭಕ್ತರು ಹಾಗೂ ಪಂಚ ಕಮಿಟಿ ಸದಸ್ಯರ ಮಧ್ಯ ಸಿದ್ಧರಾಮನ ಯೋಗ ದಂಡಕ್ಕೆ ಅಕ್ಷತಾರ್ಪಣೆ ಭೋಗಿ ಕಾರ್ಯಕ್ರಮವು ಶ್ರದ್ಧಾ-ಭಕ್ತಿ, ಸಂಭ್ರಮದಿಂದ ಜರುಗಿತು.
ಸಿದ್ದೇಶ್ವರ ಜಾತ್ರೆಯಲ್ಲಿ ಅಕ್ಷತಾರ್ಪಣೆ ಭೋಗಿ ಕಾರ್ಯಕ್ರಮವು ತನ್ನದೆಯಾದ ವಿಶೇಷತೆ ಹೊಂದಿದೆ. ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಸಿದ್ಧರಾಮನ ಯೋಗ ದಂಡದೊಂದಿಗೆ ಕುಂಬಾರ ಕನ್ಯೆ ಗುಂಡಮ್ಮಳಿಗೆ ಅಕ್ಷತಾರ್ಪಣೆ ಮಾಡಲಾಯಿತು. ವೇದ ಮೂರ್ತಿ ಮುರಗಯ್ಯ ಗಚ್ಚಿನಮಠ ಅರ್ಚಕರು ಇವರಿಂದ ಶಿವಯೋಗಿ ಸಿದ್ದರಾಮೇಶ್ವರ ಚರಿತ್ರೆ ಓದುವುದರೊಂದಿಗೆ ಶುಭ ಮಾಂಗಲ್ಯ ಧಾರಣ, ಅಕ್ಷತಾರ್ಪಣೆ ಕಾರ್ಯಕ್ರಮ ನೆರವೇರಿತು.
ಕುಂಬಾರ ಗುಂಡಮ್ಮನ ಮದುವೆ ಬಳಿಕ ಮಹಿಳೆಯರು ಪರಸ್ಪರ ಅರಿಸಿಣ-ಕುಂಕುಮ ನೀಡಿದರು.
ಇದಕ್ಕೂ ಮೊದಲು ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ ದಂಪತಿಗಳು, ಪುತ್ರ ರಾಮನಗೌಡ ಪಾಟೀಲ ಯತ್ನಾಳ ಅವರು, ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೀ ಸಿದ್ದೇಶ್ವರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ದೇವಸ್ಥಾನದ ಆವರಣದಲ್ಲಿ ಸಂಪ್ರದಾಯದಂತೆ ಅಕ್ಷತಾರ್ಪಣೆ-ಭೋಗಿ ಕಾರ್ಯಕ್ರಮವನ್ನು ನೆರವೇರಿಸಿದರು.
ನಂತರ ರಾಮನಗೌಡ ಪಾಟೀಲ (ಯತ್ನಾಳ) ಗೋ-ರಕ್ಷಾ ಕೇಂದ್ರ ಕಗ್ಗೋಡದಲ್ಲಿ ಗೋವುಗಳ ಉತ್ಪನ್ನಗಳಿಂದ ತಯಾರಿಸಿದ ಕುಂಕುಮ-ಅರಿಸಿಣ ಕೀಟ್ ಸುಮಂಗಲೆಯರಿಗೆ ನೀಡಲಾಯಿತು.
ಮೇಯರ್ ಎಂ.ಎಸ್. ಕರಡಿ, ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ಪದಾಧಿಕಾರಿಗಳಾದ ಸದಾನಂದ ದೇಸಾಯಿ, ಬಿ.ಎಸ್.ಸುಗೂರ, ಎಂ.ಎ.ಸಜ್ಜನ, ಶಿವಾನಂದ ನೀಲಾ, ರಮೇಶ ಹಳ್ಳದ, ಜಾತ್ರಾ ಸಮಿತಿಯ ಗುರು ಗಚ್ಚಿನಮಠ, ಪ್ರೇಮಾನಂದ ಬಿರಾದಾರ, ಎಸ್.ಎಂ.ಪಾಟೀಲ, ಸುರೇಶ ಇಟ್ಟಗಿ, ಅಮೃತ ತೋಸ್ನಿವಾಲ್, ಪಾಂಡು ಸಾಹುಕಾರ ದೊಡಮನಿ, ರಾಹುಲ್ ಜಾಧವ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ಪ್ರೇಮಾನಂದ ಬಿರಾದಾರ, ಎಸ್.ಸಿ. ಉಪ್ಪಿನ, ಎಸ್.ಎಚ್.ನಾಡಗೌಡ, ನಾಗಪ್ಪ ಗುಗ್ಗರಿ, ಬಸವರಾಜ ಗಣಿ, ಸುಧೀರ ಚಿಂಚಲಿ, ರಮೇಶ ಹಳ್ಳದ, ಶಿವಾನಂದ ನೀಲಾ, ಸಂತೋಷ ತಳಕೇರಿ, ವಿಠ್ಠಲ ಹೊಸಪೇಠ, ಮಾದೇವ ಜಂಗಮಶೆಟ್ಟಿ, ಮುತ್ತಪ್ಪ ಹಳ್ಳಿ, ಬಸವರಾಜ ಕಂದಗಲ್ಲ, ಈರಣ್ಣ ಪಾಟೀಲ, ಮಲಕಪ್ಪಣ್ಣ ಗಾಣಿಗೇರ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಎನ್.ಎಂ.ಗೋಲಾಯಿ, ಬಸವರಾಜ ಬಿರಾದಾರ, ರಾಜು ಕುರಿಯವರ, ರಾಜು ಗಣಿ, ಅನೀಲ ಸಬರದ, ವಿವೇಕ ಹುಂಡೇಕಾರ, ಶಂಕರ ಹೂಗಾರ, ನಂದು ಗಡಗಿ, ಶ್ರೀಶೈಲ ದೇವುರ, ಉಮೇಶ ಕೋರಿ, ಪ್ರವೀಣ ಬಿಜ್ಜರಗಿ. ಚಂದ್ರು ಚೌಧರಿ, ಶ್ರೀಶೈಲ ದೇವರ, ವಿಶಾಲ ಧಾರವಾಡಕರ, ವಿಜಯಕುಮಾರ ಮೆಂಡೆಗಾರ, ಶಿವಾನಂದ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಹಿಟ್ನಳ್ಳಿ, ಗುಳಬಾಲ ಯರಗಲ್ಲ, ಸಾಯಿ ಅಣ್ಣೆಪ್ಪನವರ, ಬಸವರಾಜ ಬೆಲ್ಲದ, ಈರಣ್ಣ ಪಾಟೀಲ, ವೀರೇಶ ಮುದಕಾಮಠ, ಶಶಿಧರ ಮುದಕಾಮಠ, ಸಿದ್ದಯ್ಯ ಹಿರೇಮಠ, ಈರಯ್ಯ ಗಣಕುಮಾರಮಠ, ಶಿವಾನಂದಯ್ಯ ಹಿರೇಮಠ ಸೇರಿದಂತೆ ಪ್ರಮುಖರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
ಮಹಾ ಪ್ರಸಾದ ಸೇವೆಯನ್ನು ಅನಿಲ ಅವಳೆ ನೆರವೇರಿಸಿದರು.
ಜ. 14ರಂದು ಮಧ್ಯಾಹ್ನ 12-30ಘಂಟೆಗೆ ನಂದಿಧ್ವಜಗಳಿಗೆ ಪೂಜೆ ಹಾಗೂ ಹೋಮ-ಹವನ ಕಾರ್ಯಕ್ರಮ ಜರುಗುವುದು.

Share this