ಸಪ್ತ ಸಾಗರ ವಾರ್ತೆ ವಿಜಯಪುರ, ಸೆ. 6 ಮಹಾಕವಿ ರನ್ನ ಫೌಂಡೇನ್ ಹಾಗೂ ವೀರ ರಾಣಿ ಕಿತ್ತೂರ ಚನ್ನಮ್ಮ ಸೌಂಸ್ಕೃತಿಕ ಕಲಾ ಸಂಘ ಮುದೋಳ ಇವರ ಸಯೋಗದಲ್ಲಿ ಸೆ. 28 ರಂದು ಕನ್ನಡ ಸಾಹಿತ್ಯ ಭವನ ಮುಧೋಳದಲ್ಲಿ ಪ್ರಥಮ ಸಮ್ಮೇಳನ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ದೇಶಿಯ ಮತ್ತು ವಿದೇಶಿಯ ಅನೇಕ ಕ್ರೀಡೆಗಳನ್ನು ಜಿಲ್ಲೆಗೆ ಮತ್ತು ರಾಜ್ಯಕ್ಕೆ ಪರಿಚಯಿಸಿ ಸ್ಥಾಪನೆ ಮಾಡಿ ಮತ್ತು ತರಬೇತಿ ನೀಡುತ್ತಿರುವದನ್ನು ಗಮನಿಸಿ ಈ ವರ್ಷ ಕೊಡುಮಾಡುವ ಕ್ರೀಡಾ ಭೀಷ್ಮ ಭೂಷಣ ರಾಜ್ಯ ಪ್ರಶಸ್ತಿಗೆ ವಿಜಯಪುರ ತಾಲೂಕಿನ ಉತ್ನಾಳದ ಬಸವರಾಜ ಬಾಗೇವಾಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಹಾಕವಿ ರನ್ನ ಫೌಂಡೇಶನ್ ಅಧ್ಯಕ್ಷ ಡಾ. ಸಿದ್ದಣ್ಣ ಬಾಡಗಿ ಮತ್ತು ವೀರ ರಾಣಿ ಕಿತ್ತೂರ ಚೆನ್ನಮ್ಮ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಬಸವರಾಜ ಕೌಜಲಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವರಾಜ ಬಾಗೇವಾಡಿ ರಾಜ್ಯ ಪ್ರಶಸ್ತಿಗೆ ಆಯ್ಕೆ
