10ರಂದು ಶಿವ ಚಿದಂಬರ ಜಯಂತ್ಯುತ್ಸವ

ಸಪ್ತಸಾಗರ ವಾರ್ತೆ, ವಿಜಯಪುರ, ನ. 8 : ವಿಜಯಪುರದ ಚಿದಂಬರ ನಗರದಲ್ಲಿರುವ ಶ್ರೀ ಚಿದಂಬರ ದೇವಾಲಯದಲ್ಲಿ ಇದೇ ದಿನಾಂಕ ೧೦ ರಂದು ಶ್ರೀ ಶಿವಚಿದಂಬರ ಜಯಂತೋತ್ಸವ ನಡೆಯಲಿದೆ.
ಶ್ರೀ ಚಿದಂಬರ ಸೇವಾ ಸಮಿತಿ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು ಸಕಲ ಸಿದ್ಧತೆಗಳನ್ನು ಭರದಿಂದ ಕೈಗೊಳ್ಳಲಾಗುತ್ತಿದೆ.
ಅಂದು ಬೆಳಿಗ್ಗೆ ೬ ಕ್ಕೆ ಕಾಕಡಾರತಿ, ಬೆಳಿಗ್ಗೆ ೭ ಕ್ಕೆ ರಜತ ನಾಗಭೂಷಣ, ನಂತರ ಶ್ರೀ ಶಿವಚಿದಂಬರೇಶ್ವರರಿಗೆ ಅಭಿಷೇಕ ನಡೆಯಲಿದೆ.
ನಂತರ ಸುವರ್ಣ ಮಹೋತ್ಸವ ಪ್ರಯುಕ್ತ ಆರು ಕೋಟಿ ಶ್ರೀ ಶಿವ ಚಿದಂಬರ ನಾಮಜಪ ಸಂಕಲ್ಪ ನಡೆಯಲಿದೆ. ಮಧ್ಯಾಹ್ನ ೧೨ ಕ್ಕೆ ತೊಟ್ಟಿಲೋತ್ಸವ ನಡೆಯಲಿದ್ದು, ಮಧ್ಯಾಹ್ನ ೧೨ ಕ್ಕೆ ಗುರುರಾಜ್ ಜೋಶಿ ಗೋಠೆ ಅವರಿಂದ ಪ್ರವಚನ ನಡೆಯಲಿದೆ. ಮಧ್ಯಾಹ್ನ ೧.೩೦ ಕ್ಕೆ ಮಹಾ ಮಂಗಳಾರತಿ, ನಂತರ ಮಹಾಪ್ರಸಾದ ವಿತರಣೆ ನಡೆಯಲಿದೆ. ೭ ರಿಂದ ಶ್ರೀ ಶಿವಚಿದಂಬರ ಭಜನೆ ಹಾಗೂ ಕಾರ್ತಿಕೋತ್ಸವ ನಡೆಯಲಿದೆ ಎಂದು ಸೇವಾ ಸಮಿತಿಯ ಲಕ್ಷ್ಮಿಕಾಂತ ಕುಲಕರ್ಣಿ ಮಾಹಿತಿ ನೀಡಿದ್ದಾರೆ.

Share this