ಶಿವಗಂಗಾಗೆ ಪಿಎಚ್ ಡಿ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 16: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಶಿವಗಂಗಾ ಅವರು ಸಲ್ಲಿಸಿದ್ದ “ಅಸೆಸ್‌ಮೆಂಟ್ ಆಫ್ ಲೈಬ್ರರಿ ಆ್ಯಂಕ್ಸೆಟಿ ಅಮಂಗ್ ಡಿಫರಂಟ್ ಕೆಟಗರೀಸ್ ಆಫ್ ಯುಸರ್ಸ: ಎ ಕಂಪ್ಯಾರೇಟಿವ್ ಅನಾಲಿಸಸ್ ಆಫ್ ಸೆಲೆಕ್ಟಡ್ ಯುನಿವರ್ಸಿಟಿ ಇನ್ ಕರ್ನಾಟಕ ಸ್ಟೇಟ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.
ಶಿವಗಂಗಾ ಅವರು ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರೊ. ಪಿ.ಜಿ ತಡಸದ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ಡಾಕ್ಟರೇಟ್ ಪದವಿ ಪಡೆದಿರುವ ಶಿವಗಂಗಾ ಅವರನ್ನು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್ ಲಕ್ಕಣ್ಣನವರ ಅಭಿನಂದಿಸಿದ್ದಾರೆ.

Share this