ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 29: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಅಧ್ಯಕ್ಷತೆಯ ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕಿ ಸೀಮಾ ಉಮೇಶ ಕೋರೆ ಅವರು ತಮ್ಮ ಜನ್ಮ ದಿನದ ಅಂಗವಾಗಿ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಕಗ್ಗೋಡ ಗ್ರಾಮದ ಶ್ರೀ ರಾಮನಗೌಡ ಪಾಟೀಲ (ಯತ್ನಾಳ) ಗೋ ರಕ್ಷಾ ಕೇಂದ್ರಕ್ಕೆ ರೂ.5 ಲಕ್ಷ ದೇಣಿಗೆ ಚೆಕ್ ನ್ನು ಸಿದ್ದೇಶ್ವರ ಸಂಸ್ಥೆ ಚೇರಮನ್ ಬಸಯ್ಯ ಹಿರೇಮಠ ಅವರಿಗೆ ಸೋಮವಾರ ನೀಡಿದರು.
ಈ ಸಂದರ್ಭದಲ್ಲಿ ದಾನಿಗಳಿಗೆ ಜನ್ಮದಿನದ ಶುಭಕೋರಿ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು. ಸಿದ್ದಸಿರಿ ಸೌಹಾರ್ದ ಸಹಕಾರಿ ನಿರ್ದೇಶಕರಾದ ಶೈಲಜಾ ಪಾಟೀಲ, ಜಗದೀಶ ಕ್ಷತ್ರಿ ಅವರು ಉಪಸ್ಥಿತರಿದ್ದರು.
ಸಿದ್ದಸಿರಿ ಸೌಹಾರ್ದ ಸಹಕಾರಿ ನಿರ್ದೇಶಕಿ ಸೀಮಾ ಕೋರೆ ಜನ್ಮ ದಿನ:ಗೋರಕ್ಷಾ ಕೇಂದ್ರಕ್ಕೆ ರೂ.5 ಲಕ್ಷ ದೇಣಿಗೆ


