ಸಪ್ತಸಾಗರ ವಾರ್ತೆ ವಿಜಯಪುರ, ಅ.5.
ಜಿಲ್ಲಾ ತೋಟಗಾರಿಕೆ ಸಂಸ್ಕರಣ ಸಂಘದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಸಿದ್ದಪ್ಪ ಕಬಾಡಗಿ ಹಾಗೂ ಉಪಾಧ್ಯಕ್ಷರಾಗಿ ನಂದಕಿಶೋರ ರಾಠೋಡ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಮುಂದಿನ ಐದು ವರ್ಷದವರೆಗೆ ಅವರು ಅಧಿಕಾರಾವಧಿ ಹೊಂದಿದ್ದು, ಅಲ್ಲದೆ, ಆಡಳಿತ ಮಂಡಳಿಯ ಸದಸ್ಯರಾಗಿ ಗುರುಪಾದಪ್ಪಗೌಡ ಪಾಟೀಲ, ಎಸ್.ಪಿ. ಬಿರಾದಾರ, ಸಂಜೀವ ಮಠ, ವಿರುಪಾಕ್ಷಿ ಕಕಮರಿ, ಹಿದಾಯಿತಲ್ಲಾ ಖಾಜಿ, ಎಸ್ .ವಿ. ಪಾಟೀಲ, ಸಂಜಯ ನಾಯಕ, ಮಡಿವಾಳಪ್ಪ ವಾಲಿಕಾರ, ಗುರುಬಾಯಿ ಕವಟಗಿ, ಸುಮಿತ್ತಾ ಅಡಹಳ್ಳಿ, ರಾಜು ಹಿಪ್ಪರಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಚೇತನ ಭಾವಿಕಟ್ಟಿ ಘೋಷಿಸಿದ್ದಾರೆ ಎಂದು ನಿರ್ದೇಶಕ ಚಾಮರಸ ಹಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Editor
Rudrappa B Asangi
Editor
Managing Editor
Chetan Asangi
Managing Editor


