ಸಪ್ತ ಸಾಗರ ವಾರ್ತೆ, ವಿಜಯಪುರ ಆ. 9: ರಕ್ಷಾ ಬಂಧನದ ಅಂಗವಾಗಿ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದವರು ಸಚಿವ ಎಂ. ಬಿ. ಪಾಟೀಲ ಅವರಿಗೆ ರಾಖಿ ಕಟ್ಟಿ ಹಬ್ಬದ ಶುಭಾಷಯ ಕೋರಿದರು.
ಶನಿವಾರ ಬೆಳಿಗ್ಗೆ ಸಚಿವರ ಗೃಹ ಕಚೇರಿಗೆ ಆಗಮಿಸಿದ ನಗರದ ಬ್ರಹ್ಮಕುಮಾರಿ ಈಶ್ವರಿಯ ವಿವಿ ಪ್ರಕೃತಿ ಕಾಲನಿ ಸೇವಾ ಕೇಂದ್ರ ಸಂಚಾಲಕಿ ಶೋಭಾ ಅವರು ಸಚಿವರಿಗೆ ರಾಖಿ ಕಟ್ಟಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಪ್ರೇಮ, ವಿಶ್ವಾಸ ಮತ್ತು ರಕ್ಷಣೆಯ ಬಾಂಧವ್ಯವನ್ನು ಪ್ರತಿಬಿಂಬಿಸುವ ಪವಿತ್ರ ಹಬ್ಬ ಸಹೋದರ–ಸಹೋದರಿಯರ ನಡುವಿನ ಆತ್ಮೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲಿ. ಪರಸ್ಪರ ನಂಬಿಕೆ ಮತ್ತು ಪ್ರೀತಿಯನ್ನು ವೃದ್ಧಿಸಲಿ. ಎಲ್ಲರ ಜೀವನದಲ್ಲಿ ಬಾಂಧವ್ಯದ ನಂಟು ಇನ್ನಷ್ಟು ಗಟ್ಟಿಯಾಗಲಿ. ಸಂಬಂಧಗಳ ಮೌಲ್ಯ ಹೆಚ್ಚಲಿ, ಪ್ರೀತಿ ಮತ್ತು ಗೌರವ ಚಿಗುರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸೇವಾ ಕೇಂದ್ರದ ಗಿರೀಶ ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಕುಮಾರಿ ಈಶ್ವರಿಯ ವಿವಿ ವತಿಯಿಂದ ಸಚಿವ ಎಂ.ಬಿ. ಪಾಟೀಲರಿಗೆ ರಾಖಿ ಕಟ್ಟಿದ ಸಹೋದರಿ ಶೋಭಾ
