ಹಿರಿಯ ನಾಗರಿಕರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ.9:
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 17ರಂದು ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರಿಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಸಾಂಸ್ಕೃತಿಕ ಸ್ಪರ್ಧೆಗಳಾದ ಗಾಯನ ಹಾಗೂ ಏಕ ಪಾತ್ರಾಭಿನಯ ಸ್ಪರ್ಧೆ ಹಾಗೂ ಕ್ರೀಡಾ ಸ್ಪರ್ಧೆಗಳಾದ ಮ್ಯೂಸಿಕಲ್ ಚೇರ್, ಬಿರುಸಿನ ನಡಿಗೆ , ಬಕೆಟ್‍ನಲ್ಲಿ ಬಾಲ್ ಎಸೆಯುವುದು.60 ರಿಂದ 70 ವಯೋಮಾನ‌ದವರು ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ವಿಜಯಪುರ ಜಿಲ್ಲಾ ಸಂಯೋಜಕರಾದ ಪ್ರತಿಭಾ ಮಾದರ ಮೊ: 9606151149, ವಿಜಯಪುರ ತಾಲೂಕ ಪಂಚಾಯತಿಯ ಸಂಯೋಜಕರಾದ ರವಿ ರಾಠೋಡ ಮೊ: 9035553337, ಇಂಡಿ ತಾಲೂಕ ಪಂಚಾಯತಿಯ ಸಂಯೋಜಕರಾದ ಪರಶುರಾಮ ಭೋಸಲೆ ಮೊ: 9972441464, ಸಿಂದಗಿ ತಾಲೂಕ ಪಂಚಾಯತಿಯ ಸಂಯೋಜಕರಾದ ಮೊ: ಮುತ್ತುರಾಜ ಸಾತಿಹಾಳ ಮೊ: 9980019635, ಮುದ್ದೇಬಿಹಾಳ ತಾಲೂಕ ಪಂಚಾಯತಿಯ ಸಂಯೋಜಕರಾದ ಎಸ್.ಕೆ.ಘಾಟಿ ಮೊ: 9740682979 ಹಾಗೂ ಬಸವನ ಬಾಗೇವಾಡಿ ತಾಲೂಕ ಪಂಚಾಯತಿಯ ಸಂಯೋಜಕರಾದ ಶೀವಲೀಲಾ ಬಿರಾದಾರ ಮೊ: 8722135660ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Share