ಡೊಣಗಿ ದಂಪತಿಗಳಿಗೆ ರಾಜ್ಯ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 5 ಇಲ್ಲಿನ ಐಶ್ವರ್ಯ ನಗರದ ಶಿಕ್ಷಕ ಸಾಹಿತಿ ಶ್ರೀಮಂತ ಡೊಣಗಿ ಹಾಗೂ ಸಾಹಿತಿ ಬಂಗಾರೆವ್ವ ಡೊಣಗಿ ಅವರಿಗೆ ರಾಜ್ಯ ಆದರ್ಶ ದಂಪತಿ ಪ್ರಶಸ್ತಿ ಲಭಿಸಿದೆ.
ಇದೇ ಜನೆವರಿ 4ರಂದು ನಗರದ ಚೇತನಾ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಡೊಣಗಿ ದಂಪತಿಗಳಿಗೆ ಸಮಾರಂಭದ ಸರ್ವಾಧ್ಯಕ್ಷ ಡಾ. ಪಂಚಯ್ಯ ಹಿರೇಮಠ, ಉದ್ಘಾಟಕರಾಗಿ ಆಗಮಿಸಿದ ಸಾಹಿತಿ ರಾಜಶೇಖರ ಮಠಪತಿ, ಸಮಾಜ ಸೇವಕ ಸೋಮನಗೌಡ ಅಪ್ಪು ಪಾಟೀಲ,ಸಾಹಿತಿ ಅಶೋಕ ಹಂಚಲಿ,ನಿಂಗನಗೌಡ ಪಾಟೀಲ, ಸುಜ್ಞಾನಿ ಪಾಟೀಲ ಮತ್ತಿತರರು ಪ್ರಶಸ್ತಿ ನೀಡಿ ಶುಭಹಾರೈಸಿದರು.
ಶ್ರೀಮಂತ ಡೊಣಗಿ ಅವರು ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಒಳಗೊಂಡು ಹಲವಾರು ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ ವಿವಿಧ ಸರಕಾರಿ ಕಾರ್ಯಕ್ರಮಗಳು, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಹಲವು ಕವನ, ಕಥೆ, ಚುಟುಕು, ಹಾಸ್ಯ ಹನಿಗವನ, ಕಿರುನಾಟಕ ಬರೆದ ಡೊಣಗಿ ಅವರು ಸಾಹಿತ್ಯ ಪ್ರಿಯರು.
ಅದೇ ರೀತಿ ಅವರ ಪತ್ನಿ ಬಂಗಾರೆವ್ವ ಡೊಣಗಿ ಅವರೂ ಕೂಡ ಸಾಹಿತಿಯಾಗಿದ್ದು ಹಲವು ಕವನಗಳನ್ನು ಬರೆದು ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಅಲ್ಲದೆ ಮೂವರು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡಿ ಬೆಳೆಸಿದಲ್ಲದೆ ವಿಶ್ವ ಮಟ್ಟದ ಸಾಧನೆ ಮಾಡಲು ಪ್ರೋತ್ಸಾಹ ನೀಡಿ ವಿಜಯಪುರ ಕೀರ್ತಿ ಜಗದ ತುಂಬಾ ಹರಡಿಸಿದ್ದು ಶ್ಲಾಘನೀಯ. ಈ ಮೂವರು ಮಕ್ಕಳು ಹಲವು ಪ್ರಶಸ್ತಿ, ಜಿಲ್ಲಾ, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದು ವಿಶೇಷ.
ಡೊಣಗಿ ದಂಪತಿಗಳಿಗೆ ಸಮಾರಂಭದಲ್ಲಿದ್ದ ಸಾಹಿತಿ ಪ ಗು ಸಿದ್ದಾಪುರ, ಮಲ್ಲಿಕಾರ್ಜುನ ಬೃಂಗಿಮಠ, ಮುರುಗೇಶ್ ಸಂಗಮ, ಚಂದ್ರಕಲಾ ಇಟಗಿಮಠ, ಶಂಕರ ಬೈಚಬಾಳ, ಎ ಎಚ್ ಕೊಳಮಳಿ, ಸುಧಾ ರೆಬಿನಾಳ, ಬಿ ಆರ್ ಬನಸೋಡೆ, ವಿಶ್ವ ದಾಖಲೆ ಸಾಧಕರಾದ ಭಾಗ್ಯಶ್ರೀ, ರೇವಣ್ಣ, ಐಶ್ವರ್ಯ ಮತ್ತಿತರರು ಉಪಸ್ಥಿತರಿದ್ದರು.

Share this