ಆಗಸ್ಟ್ 2,3 ರಂದು ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಅಸ್ಮಿತಾ ವುಶು ಲೀಗ್ ಕ್ರೀಡಾಕೂಟ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 16:
ಆಗಸ್ಟ್ 2 ಹಾಗೂ 3ರಂದು ಕರ್ನಾಟಕ ರಾಜ್ಯ ವುಶು ಸಂಸ್ಥೆಯ ವತಿಯಿಂದ, ದಾವಣಗೆರೆಯಲ್ಲಿ ಸಬ್ ಜ್ಯೂನಿಯರ್, ಜೂನಿಯರ್, ಬಾಲಕಿಯರ ಮತ್ತು ಮಹಿಳೆಯರ ವುಶು ಕ್ರೀಡಾಕೂಟ ನಡೆಯಲಿದೆ.
ಕರ್ನಾಟಕ ರಾಜ್ಯ ವುಶು ಸಂಸ್ಥೆಯು ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಓಲಂಪಿಕ್ ಸಂಸ್ಥೆ, ಭಾರತೀಯ ವುಶು ಒಕ್ಕೂಟದಿಂದ ಮಾನ್ಯತೆ ಪಡೆದ ವುಶು ಕ್ರೀಡೆಯಾಗಿದೆ. ವುಶು ಕ್ರೀಡೆಯು ದಸರಾ ಕ್ರೀಡಾಕೂಟದಲ್ಲಿ, ಮಿನಿ ಓಲಂಪಿಕ್ ಕ್ರೀಡಾಕೂಟದಲ್ಲಿ, ವಿಶ್ವ ವಿದ್ಯಾಲಯ ಕ್ರೀಡಾಕೂಟದಲ್ಲಿ, ಸೇರ್ಪಡೆಯಾದ ವುಶು ಕ್ರೀಡೆಯಾಗಿದೆ. ಕಾರಣ ಕ್ರೀಡಾಕೂಟದಲ್ಲಿ ಭಾಗವಹಿಸುವ ವಿಜಯಪುರ ಜಿಲ್ಲೆಯ ವುಶು ಕ್ರೀಡಾಪಟುಗಳು ಜುಲೈ 30 ರೊಳಗಾಗಿ ಮೊ. 9901944390 ಗೆ ತಿಳಿಸಬೇಕೆಂದು ವಿಜಯಪುರ ಜಿಲ್ಲಾ ವುಶು ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಗೇವಾಡಿ ಉತ್ನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this