ರಾಜ್ಯ ಮಟ್ಟದ ಸೂರ್ಯ ನಮಸ್ಕಾರ ಕ್ರೀಡಾಕೂಟ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 1: ಸೆ.6 ಮತ್ತು 7 ರಂದು ನಗರದ ಕೆ.ಎಸ್. ಆರ್.ಟಿ. ಸಿ ಡಿಪೋ ನಂಬರ್ 2ರ ಬಳಿ ಇರುವ ಅಭಿನವ ವಿದ್ಯಾ ಸಂಸ್ಥೆಯ ಆವರಣದಲ್ಲಿ ಪ್ರಥಮ ಕರ್ನಾಟಕ ರಾಜ್ಯ ಮಟ್ಟದ ಸೂರ್ಯನಮಸ್ಕಾರ ಕ್ರೀಡಾಕೂಟವು ಜರಗುವದು.
ಸೂಪರ್ ಮಿನಿ 9 ವರ್ಷದ ಒಳಗಡೆ ಬಾಲಕ, ಬಾಲಕಿಯರು, ಮಿನಿ 12 ವರ್ಷದ ಒಳಗಡೆ ಬಾಲಕ, ಬಾಲಕಿಯರು ಮತ್ತು, 14 ವರ್ಷದ ಒಳಗಡೆ ಬಾಲಕ ಬಾಲಕಿಯರು, 18 ವರ್ಷದ ಒಳಗಡೆ ಬಾಲಕ, ಬಾಲಕಿಯರು, ಹಾಗೂ 18 ವರ್ಷದ ಮೇಲ್ಪಟ್ಟವರು ಮಹಿಳೆಯರು, ಪುರುಷರು ಕ್ರೀಡಾಕೂಟದಲ್ಲಿ ಭಾಗವಹಿಸಬಹುದು.
ಸೋಲೋ, ಡಬಲ್ ಹಾಗೂ ಮಿಕ್ಸ್ ಡಬಲ್ ಈ ರೀತಿಯಾಗಿ ಸೂರ್ಯ ನಮಸ್ಕಾರ ಕ್ರೀಡಾಕೂಟ ನಡೆಯುವುದು.
ಜಿಲ್ಲಾ, ಮತ್ತು ರಾಜ್ಯ, ಶಿಕ್ಷಕರ ಮತ್ತು ನಿರ್ಣಾಯಕರ ತರಬೇತಿ ನಡೆಯುವುದು. ಆದ ಕಾರಣ ಸೂರ್ಯನಮಸ್ಕಾರ ತರಬೇತಿದಾರರು ಮತ್ತು ಕ್ರೀಡಾಪಟುಗಳು ಭಾಗವಹಿಸಬೇಕೆಂದು ಎಂದು ಅಖಿಲ ಕರ್ನಾಟಕ ಸೂರ್ಯನಮಸ್ಕಾರ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಗೇವಾಡಿ ಉತ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share