2.50 ಲಕ್ಷ ಖಾಲಿ ಹುದ್ದೆ ಭರ್ತಿಗೆ ಕ್ರಮ:ಪರಮೇಶ್ವರ್

ಸಪ್ತಸಾಗರ ವಾರ್ತೆ,ವಿಜಯಪುರ, ನ. 26:
ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಬಿದ್ದಿರುವ 2.50 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದರು.
ಬುಧವಾರ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು.
ಚುನಾವಣೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆಂದು ಹೇಳಿದ್ದೇವು.
ಒಳ ಮೀಸಲಾತಿಯಿಂದ ತಡವಾಗಿದೆ.
ಈಗ ನೇಮಕಾತಿ ಮಾಡುತ್ತೇವೆ. ಭರವಸೆಯಂತೆ ನಡೆದುಕೊಳ್ಳುತ್ತಿದ್ದೇವೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಬಡ್ತಿ ವಿಳಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿ,
ಹಿಂದೆ ನಾನು ಗೃಹ ಸಚಿವನಾಗಿದ್ದಾಗ
12000 ಅಧಿಕಾರಿಗಳು ಸಿಬ್ಬಂದಿಗಳಿಗೆ ಪ್ರಮೋಷನ್ ನೀಡಿದ್ದೇನೆ.
ಈಗ ಯಾರಿಗೂ ಅನ್ಯಾಯವಾಗದಂತೆ ಬಡ್ತಿ ಹಾಗೂ ನೇಮಕಾತಿ ಮಾಡುತ್ತೇವೆ.
ಹಿಂದೆ ಪಿಎಸೈ ನೇಮಕಾತಿ ಅಕ್ರಮವಾದ ಬಳಿಕ ರದ್ದು ಮಾಡಿದ್ದೇವು.
ಬಿಜೆಪಿ ಅಧಿಕಾರಾವಧಿಯಲ್ಲಿ ಅಕ್ರಮ ಆಗಿತ್ತು. ಈಗ 15000 ಪೊಲೀಸ್ ಕಾನ್ಸಸ್ಟೇಬಲ್ಸ್ ಹುದ್ದೆಗಳ ನೇಮಕಾತಿ ಹಂತ ಹಂತವಾಗಿ ಮಾಡುತ್ತೇವೆ.
4500 ಪಿಸಿ ನೇಮಕಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಅನೇಕ ಕಾರಣಗಳಿಂದ ಕೆಲ ನೇಮಕಾತಿ ಆಗಿಲ್ಲ. ಈಗ ಮಾಡಲಾಗುತ್ತದೆ.
ಎರಡು ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ದಲಿತ ಸಿಎಂ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಪರಮೇಶ್ವರ್,
ಈ ಕುರಿತು ಪ್ರತಿಕ್ರಿಯೆ ನೀಡಲ್ಲ.
ಹೈಕಮಾಂಡ್ ಸೂಚನೆಯಂತೆ ನಡೆಯುತ್ತೇವೆ. ನಮ್ಮವರೇ ಎಐಸಿಸಿ ಅಧ್ಯಕ್ಷರಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ. ಅವರಿಗೆ 50 ವರ್ಷ ಸುದೀರ್ಘ ರಾಜಕಾರಣದ ಅನುಭವವಿದೆ.
ನಮ್ಮವರ ಮನಸ್ಸು ಅವರಿಗೆ ಅರ್ಥ ಆಗುತ್ತದೆ ಎಂದು ಹೇಳಿದರು.
ಶಾಸಕರ‌ ಖರೀದಿ ಹಾಗೂ ಇತರೆ ವಿಚಾರ ಕುರಿತು‌ ವಿರೋಧ ಪಕ್ಷದವರ ಆರೋಪಕ್ಕೆ ಉತ್ತರಿಸಿ, ಬೇರೆ ಪಕ್ಷದವರ ಹೇಳಿಕೆಗೆ ನನ್ನ ಉತ್ತರ ಇಲ್ಲ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಸಿಎಂ ಅದರೆ ಬೆಂಬಲಿಸುವೆ ಎಂದು ಸಚಿವ
ಶಿವಾನಂದ ಪಾಟೀಲ್ ಹೇಳಿಕೆ ಕುರಿತು ಮಾತನಾಡಿ, ಅದು ಅವರ ಅಭಿಪ್ರಾಯ ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರ ಅಂತಿಮ ಎಂದು‌ ತಿಳಿಸಿದರು.
ನಮ್ಮ ಸರ್ಕಾರ ನೀಡಿದ ಭರವಸೆ ಹಾಗೂ ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ.
ಎಲ್ಲ ಕಾರ್ಯಕ್ರಮ ನಡೆಸುತ್ತಿದ್ದೇವೆ.
ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿದೆ ಎಂದು ತಿಳಿಸಿದರು.

Share this