ಸಪ್ತಸಾಗರ ವಾರ್ತೆ ವಿಜಯಪುರ, ನ. 14: ಇಲ್ಲಿನ ಆದರ್ಶ ನಗರದ ಎಕ್ಸಲಂಟ್ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಜವಾಹರಲಾಲ್ ನೆಹರು ಅವರ ಜನ್ಮದಿನದ ನಿಮಿತ್ತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಹಿಂದಿನ ವಿದ್ಯಾರ್ಥಿನಿ ಕುಮಾರಿ ಮಧುಮತಿ. ಆರ್. ಅಳ್ಳಗಿ, ಮಾತನಾಡಿ, ಬಡತನವು ಓದಿಗೆ ಎಂದೂ ಅಡ್ಡಿಯಾಗಲಾರದು. ವಿದ್ಯಾರ್ಥಿಗಳು ಕಲಿಕೆಯ ದಿನಗಳಲ್ಲಿ ಅತಿರಂಜಿತ ನಾಗರಿಕ ಸೌಲಭ್ಯಗಳಿಗೆ ಮನಸ್ಸು ಸೋಲದೆ ಏಕಾಗ್ರತೆಯಿಂದ ಅಧ್ಯಯನ ಮಾಡಿದಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು. ಸುಂದರ ಆಲೋಚನೆಗಳು ಮಾತ್ರ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸುಭದ್ರಗೊಳಿಸುತ್ತವೆ. ಪರಸ್ಪರರಲ್ಲಿ ಪ್ರೀತಿ, ಸಹಕಾರ, ಹೊಂದಾಣಿಕೆಯಂತಹ ಆದರ್ಶಪ್ರಾಯ ನಿಲುವುಗಳಿಂದ ಪ್ರತಿ ವ್ಯಕ್ತಿಯ ಜೀವನ ಸಮೃದ್ಧ ಮತ್ತು ಸುಖಮಯವಾಗುತ್ತದೆ. ಮಕ್ಕಳು ಬದುಕಿನಲ್ಲಿ ಹೊಸದೇನನ್ನಾದರೂ ಸಾಧಿಸಲೆಂದು ಪರಿತಪಿಸುವ ಹೆತ್ತವರ ಪಾಲಿಗೆ ಮಕ್ಕಳು ಶ್ರದ್ಧೆಯಿಂದ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಅವರ ಕನಸುಗಳನ್ನು ನನಸಾಗಿಸಬೇಕೆಂದರು.
ರಾಜಶೇಖರ ಕೌಲಗಿ ಮಾತನಾಡಿ, ವಿದ್ಯಾರ್ಥಿಗಳು ನಕಾರಾತ್ಮಕ ಪರಿಣಾಮ ಬೀರುವ ಹವ್ಯಾಸಗಳಿಂದ ದೂರವಿರಬೇಕು. ದೊಡ್ಡವರು ಮಕ್ಕಳ ತಪ್ಪುಗಳು ಪ್ರಾಥಮಿಕ ಹಂತದಲ್ಲಿರುವಾಗ ಕಂಡುಕೊಂಡು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿಗಳು ಪಾಲಕರ, ಶಿಕ್ಷಕರ ಮತ್ತು ಹಿರಿಯರ ಹಿತ ವಚನಗಳನ್ನು ಅತ್ಯಂತ ಗೌರವಗಳಿಂದ ಪಾಲಿಸಬೇಕು. ಅದುವೇ ಕಿರಿಯರ ಪಾಲಿಗೆ ಶೋಭೆ ಎಂದರು.
ಶಾಲೆಯ ಮುಖ್ಯ ಗುರುಗಳಾದ ಎಂ. ಐ. ಬಿರಾದಾರ, ವಿದ್ಯಾರ್ಥಿ ಪ್ರತಿನಿಧಿಗಳಾದ ಕು. ಸಮೃದ್ಧಿ ಭೋವಿ, ಕು. ಶೃದ್ಧಾ ಪಾಟೀಲ, ಕು. ಸ್ಪಂದನಾ ತೇಲಿ, ಕು. ನಾಗರಾಜ ಮಡಸನಾಳ, ಕು. ರೂಪಾಲಿ ರಾಠೋಡ. ಮತ್ತು ಶಿಕ್ಷಕರಾದ ಪಿ. ಬಿ. ಖೇಡಗಿ, ಎಂ. ಹೆಚ್. ಹುಗ್ಗೇನವರ, ಸಿ. ಬಿ. ಕೆಂಗಾರ, ಜೆ. ಆರ್. ಗುಡ್ಡದ, ಎಸ್. ಬಿ. ತುರಕನಕೇರಿ, ಲಕ್ಷ್ಮೀ. ಬಿರಾದಾರ, ಆರ್. ಎಸ್. ಪಾಟೀಲ, ಎ. ಡಿ. ಅವಟಿ. ಮತ್ತು ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸೃತಿಕ ಕಾರ್ಯಕ್ರಮ ಜರುಗಿದವು.
ಸುಂದರ ಆಲೋಚನೆಗಳಿಂದ ಸುಭದ್ರ ವ್ಯಕ್ತಿತ್ವ: ಕುಮಾರಿ ಮಧುಮತಿ ಅಳ್ಳಗಿ


