ಸಪ್ತಸಾಗರ ವಾರ್ತೆ, ವಿಜಯಪುರ, ನ. 14:
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಕೈಗೊಂಡ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ
ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು ಬೆಂಬಲಿಸಿದರು.
ಶುಕ್ರವಾರ ವಿದ್ಯಾರ್ಥಿನಿಯರಾದ ದನಿಯಾ, ಮೀನು, ಶೆರ್ವಿನ್, ಅಪ್ಶಾ, ರಾಜೇಶ್ವರಿ, ಯತೀಶ್, ರತ್ನಪ್ರಿಯ, ಆಲನ್ , ಆಕಾಂಕ್ಷಾ, ಕಿಶೋರ್, ಶರೀನಾ, ಆದಿ, ಅಂಜಲಿ, ನೀಲಕಂಠ, ಶಿವಾನಿ, ಕ್ಯಾಲ್ವಿನ್ , ಮಣಿ, ಮಾತನಾಡಿ, ನಾವು ಹಿಂದುಳಿದ ಜಿಲ್ಲೆಗಳ ಆರ್ಥಿಕ, ಸಾಮಾಜಿಕ, ಸಂಸ್ಕೃತಿಕ ಅಧ್ಯಯನಕ್ಕೋಸ್ಕರ ನಾಲ್ಕುದಿನ ವಿಜಯಪುರಕ್ಕೆ ಬಂದಿದ್ದೇವೆ. ಇದೇ ಸಂದರ್ಭದಲ್ಲಿ ಸರಕಾರಿ ವೈದ್ಯಕೀಯ ಕಾಲೇಜಿಗಾಗಿ ಹೋರಾಟ ನಡೆಯುತ್ತಿರುವುದು ತಿಳಿದು ಈ ಹೋರಾಟವನ್ನು ಬೆಂಬಲಿಸಲು ಬಂದಿದ್ದೇವೆ ಎಂದು ಹೇಳಿದರು.
ಹಿಂದುಳಿದ ಜಿಲ್ಲೆಗಳ ಅಭಿವೃದ್ದಿಗೆ ಸರಕಾರ ಗಮನ ಕೊಡಬೇಕು. ಇಲ್ಲಿನ ಶಾಸಕರುಗಳು ನಾಗರಿಕರ ಅವಶ್ಯಕತೆಗಳನ್ನು ಇಡೇರಿಸುವತ್ತ ಗಮನ ಹರಿಸಬೇಕು. ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆಯಲ್ಲಿ ಮತ ಕೇಳುವುದು ಮತ್ತು ಹಾಕುವುದು ಅಲ್ಲ ಬದಲಾಗಿ ಜನರ ಬದುಕನ್ನು ಜಾತಿ ಧರ್ಮಗಳಾಚೆ ಉತ್ತಮಗೊಳಿಸುವುದು ಎಂದು ಹೇಳಿದರು.
ಬಡ ವಿದ್ಯಾರ್ಥಿಗಳಲ್ಲಿ ಎಷ್ಟೇ ಪ್ರತಿಭಾವಂತರಿದ್ದರೂ ಅತಿಯಾದ ಶುಲ್ಕ ಮತ್ತು ಡೋನೇಷನ್ ನಿಂದಾಗಿ ಉನ್ನತ ಶಿಕ್ಷಣ ಮುಂದೆವರೆಸಲು ಆಗುತ್ತಿಲ್ಲ. ಸರಕಾರಿ ಕಾಲೇಜುಗಳಿದ್ದರೆ ಬಡವರಿಗೆ ಶಿಕ್ಷಣ ತಲುಪುತ್ತವೆ ಎಂದರು.
ಶಿಕ್ಷಣ ಖಾಸಗಿ ಕಂಪನಿಗಳಿಗೆ ವಹಿಸಬಾರದು. ಅದು ಸರಕಾರದ ಕೈಯಲ್ಲೇ ಇರಬೇಕು. ಜನತೆ ತಮ್ಮ ಹಕ್ಕುಗಳಿಗೆ ಯಾವತ್ತೂ ಹೋರಾಡಬೇಕು . ನ್ಯಾಯ ಸಿಗುವವರೆಗೂ ಹೋರಾಟ ಮಾಡಬೇಕು ಎಂದರು.
ಶ್ರೀಮಂತರಿಗೊಂದು ಬಡವರಿಗೊಂದು ತರಹದ ಆರೋಗ್ಯ ಮತ್ತು ಶಿಕ್ಷಣ ಇರಬಾರದು. ಅದು ಎಲ್ಲರಿಗೂ ಒಂದೇ ತರಹದ ಸಮಾನವಾದ ಶಿಕ್ಷಣ ಬೇಕಾಗಿದೆ.
ಹಿಂದುಳಿದ ಜಿಲ್ಲೆಗಳಿಗೆ ಸರಕಾರ ಮೊದಲ ಅದ್ಯತೆ ಕೊಡಬೇಕು. ನಂತರ ಮುಂದುವರೆದ ಜಿಲ್ಲೆಗಳಿಗೆ ಗಮನ ಹರಿಸಬೇಕು. ಆದರೆ ಸರಕಾರ ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವಲ್ಲಿ ವಿಫಲವಾಗಿವೆ ಎಂದರು.
ಸರ್ಕಾರಿ ವೈದ್ಯಕಿಯ ಕಾಲೇಜ್ ಸ್ಥಾಪನೆ ಹೋರಾಟಕ್ಕೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್ ವಿದ್ಯಾರ್ಥಿಗಳ ಬೆಂಬಲ


