ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 27:
ಆರ್ಟ್ ಆಫ್ ಲಿವಿಂಗ್ ವತಿಯಿಂದ ಸೆಪ್ಟೆಂಬರ್ 29ರಿಂದ ನಗರದ ಗೋಕುಲ ಪಾರ್ಕ್, ಸಮರ್ಥನಗರದ ಏಳು ಮಕ್ಕಳ ತಾಯಿ ದೇವಸ್ಥಾನದ ಸಭಾಭವನದಲ್ಲಿ ಸುದರ್ಶನ ಕ್ರಿಯಾ ಶಿಬಿರ ಆಯೋಜಿಸಲಾಗಿದೆ.
ಹಿರಿಯ ಹಾಗೂ ಅನುಭವಿ ಯೋಗ ಶಿಕ್ಷಕ ಡಾ. ಬಿ.ಎಂ. ಪಾಟೀಲ ಗುರೂಜಿ ಅವರ ನೇತೃತ್ವದಲ್ಲಿ ನಡೆಯಲಿರುವ ಶಿಬಿರದಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ ಹಾಗೂ ಸುದರ್ಶನ ಕ್ರಿಯೆಯ ಕುರಿತು ತರಬೇತಿ ನೀಡಲಾಗುವುದು.
ದೈನಂದಿನ ಜೀವನದಲ್ಲಿ ಎದುರಾಗುವ ಒತ್ತಡ, ಆತಂಕ ಹಾಗೂ ಕಾರ್ಯದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಲು ಸಹಕಾರಿಯಾಗುವ ಸರಳ ಅಭ್ಯಾಸಗಳನ್ನು ಶಿಬಿರದಲ್ಲಿ ಪರಿಚಯಿಸಲಾಗುವುದು. ಸುದರ್ಶನ ಕ್ರಿಯೆಯು ಮಾನಸಿಕ ಒತ್ತಡ ಕಡಿಮೆ ಮಾಡಿಕೊಂಡು ಮನಸ್ಸಿನಲ್ಲಿ ನೆಮ್ಮದಿ ಹಾಗೂ ಉಲ್ಲಾಸ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಆಸಕ್ತರು ಶಿಬಿರದಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಆರ್ಟ್ ಆಫ್ ಲಿವಿಂಗ್ನ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಶಿಬಿರದ ಸಂಯೋಜಕಿ ಸಹನಾ ಪಾಟೀಲ ಹಾಗೂ ಸ್ಥಳೀಯ ಪ್ರತಿನಿಧಿಗಳನ್ನು 8050280580, 9989725556, 9480780042, 8549874720, 6362849099, 827704042 ಮೊಬೈಲ್ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೆ. 29ರಿಂದ ಸುದರ್ಶನ ಕ್ರಿಯಾ ಶಿಬಿರ


