ವಿಜಯಪುರ ನಗರದಲ್ಲಿ ಮಾರ್ಚ್ 3 ರಿಂದ 8ರ ವರೆಗೆ ಸುದರ್ಶನ ಕ್ರಿಯಾ ಶಿಬಿರ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ.1 :
ಆರ್ಟ್ ಆಫ್ ಲಿವಿಂಗ್ ವತಿಯಿಂದ ವಿಜಯಪುರದಲ್ಲಿ ಸಂತಸದ ಕಾರ್ಯಕ್ರಮ ಹಾಗೂ ಸುದರ್ಶನ ಕ್ರಿಯಾ ಶಿಬಿರವನ್ನು ಸೋಮವಾರ ಮಾರ್ಚ್ 02 ರಿಂದ 08 ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಯೋಗ, ಧ್ಯಾನ, ಪ್ರಾಣಾಯಾಮ, ವಿಶೇಷವಾಗಿ ಸುದರ್ಶನ ಕ್ರಿಯಾ, ಆರೋಗ್ಯ ಒತ್ತಡರಹಿತ ಜೀವನ, ಮಾನಸಿಕ ಸದೃಢತೆ ಹಾಗೂ ಜೀವನ ಕಲೆ ಸೂತ್ರಗಳನ್ನು ಒಳಗೊಂಡಿರುವ ಈ ಕಾರ್ಯಕ್ರಮವು ಆರ್ಟ್ ಆಫ್ ಲಿವಿಂಗ್ ನ ನುರಿತ ಹಿರಿಯ ಅನುಭವಿ ಗುರುಗಳಾದ ಡಾ. ಬಿ ಎಂ. ಪಾಟೀಲ ಗುರೂಜಿ ಅವರ ನೇತೃತ್ವದಲ್ಲಿ ಬೆಳಗ್ಗೆ 5:30 ರಿಂದ 8:00 ವರೆಗೆ ಹಾಗೂ ಸಂಜೆ 6:00 ರಿಂದ 8:30 ವರೆಗೆ ಪ್ರತ್ಯೇಕ ಎರಡು ಬ್ಯಾಚುಗಳಲ್ಲಿ ಸಂತ ಶ್ರೀ ಸೇವಾಲಾಲ್ ಮತ್ತು ದುರ್ಗಾದೇವಿ ದೇವಸ್ಥಾನ ಎಕ್ಸಲೆಂಟ್ ಕೋಚಿಂಗ್ ಸೆಂಟರ್ ಹತ್ತಿರ
ಆದರ್ಶ ನಗರ, ವಿಜಯಪುರದಲ್ಲಿ ಜರುಗುವುದು. ಇದಕ್ಕೆ ಪೂರಕವಾಗಿ ಮಾ. 2 ರಂದು ಸಂಜೆ 6 ಗಂಟೆಗೆ ಸತ್ಸಂಗ, ಶಿಬಿರದ ಪರಿಚಯ ಕಾರ್ಯಕ್ರಮ, ಹೆಸರು ನೋಂದಣಿ ಮಾಡಿಕೊಳ್ಳಲಾಗುವುದು.
ಹೆಚ್ಚಿನ ವಿವರಗಳಿಗೆ ಸಹನಾ ಪಾಟೀಲ, ಶೋಭಾ ಪಾಟೀಲ, ಎನ್.ಡಿ.ಮಸೂತಿ, ಚಂದ್ರಶೇಖರ ಸಿಂಧೂರ 8050280580,94807 80042 ಸಂಖ್ಯೆಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

Share this