ಏಕಾಏಕಿ ಪೊಲೀಸ್ ಠಾಣೆ ಮೇಲ್ಚಾವಣಿ ಕುಸಿತ: ಗಾಬರಿಯಿಂದ ಓಡಿ ಹೋದ ಪೊಲೀಸರು

ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 16: ಠಾಣೆಯಲ್ಲಿ ಪೊಲೀಸರು ವ್ಯಕ್ತಿಯೊಂದಿಗೆ ಮಾತನಾಡುವಾಗ ಏಕಾಏಕಿ ಠಾಣೆಯ ಮೇಲ್ಚಾವಣಿ ಕುಸಿದು ಬಿದ್ದಿರುವ ಘಟನೆ ವಿಜಯಪುರ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿಗಳು ವ್ಯಕ್ತಿಯೊಂದಿಗೆ ಚರ್ಚೆ ನಡೆಸಿದಾಗ ಮೇಲ್ಛಾವಣಿ ಕುಸಿದು ಪೊಲೀಸ್ ಹಾಗೂ ವ್ಯಕ್ತಿಯ ಮೇಲೆ ಕುಸಿಯುತ್ತಿತ್ತು. ಆದರೆ, ಅದೃಷ್ಟವಶಾತ್ ಯಾರ ಮೇಲೆಯು ಮೇಲ್ಛಾವಣಿ ಬಿದ್ದಿಲ್ಲ. ಇದರಿಂದ ಯಾರಿಗೂ ಹಾನಿಯಾಗಿಲ್ಲ. ಆದರೆ, ಪೊಲೀಸ ಅಧಿಕಾರಿ ಗಾಬರಿಯಿಂದ ಒಳಗಡೆಗೆ ಓಡಿ ಹೋಗಿದ್ದರು. ಇನ್ನು ಮೇಲ್ಛಾವಣಿ ಕುಸಿತ ಪೊಲೀಸ್ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Share this