ವಾರ್ತೆ, ವಿಜಯಪುರ, ಡಿ. 2: ನಗರದ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸೆಸ್ನ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ಅವರಿಗೆ
ರಾಷ್ಟ್ರ ಮಟ್ಟದ ಕರುನಾಡು ಕಲ್ಪವೃಕ್ಷ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.
ಕರುನಾಡು ಕಲ್ಪವೃಕ್ಷ ಫೌಂಡೇಶನ(ರಿ),
ಕರುನಾಡು ಕಲ್ಪವೃಕ್ಷ ಸಾಹಿತ್ಯ ವೇದಿಕೆ ಹಾಗೂ ಚಿತ್ರದುರ್ಗದ
ಕರುನಾಡು ಕಲ್ಪವೃಕ್ಷ ಪ್ರಕಾಶನ ಇವರ ಸಹಯೋಗದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಮ್ಮೇಳನದಲ್ಲಿ ಸುರೇಶ ಜತ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸೆಸ್ ನ ಮೂಲಕ ಉತ್ತರ ಕರ್ನಾಟಕದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿರುವ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಾವೇರಿಯಲ್ಲಿ ಡಿಸೆಂಬರ್ 7 ರಂದು ನಡೆಯುತ್ತಿರುವ ಪ್ರಥಮ ಸಾಹಿತ್ಯ ಕಲ್ಪವೃಕ್ಷೋತ್ಸವ ರಾಷ್ಟ್ರ ಮಟ್ಟದ ಕರುನಾಡು ಕಲ್ಪವೃಕ್ಷ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥಾಪಕ ಕನಕ ಪ್ರೀತೀಶ ಹಾಗೂ ರಾಜ್ಯಾಧ್ಯಕ್ಷೆ ರೇಖಾ ಶಿವರಾಮ್ ಭಟ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುರೇಶ ಜತ್ತಿಗೆ ರಾಷ್ಟ್ರ ಮಟ್ಟದ ಕರುನಾಡು ಕಲ್ಪವೃಕ್ಷ ರಾಷ್ಟ್ರೀಯ ಪ್ರಶಸ್ತಿ


