ಸಪ್ತಸಾಗರ ವಾರ್ತೆ, ವಿಜಯಪ, ಜ. 12: ನಗರದ ವೇದ ಅಕಾಡೆಮಿಯಲ್ಲಿ ಅರ್ಥಪೂರ್ಣವಾಗಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಭಾರತದ ಶ್ರೇಷ್ಠ ಸನ್ಯಾಸಿ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಹಾಗೂ ಭಾರತೀಯ ಅಧ್ಯಾತ್ಮಿಕ ಪ್ರಪಂಚಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು.
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾಚಾರ್ಯ ಮಧ್ವಪ್ರಸಾದ ಜಿ.ಕೆ ಅವರು ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಜೀವನ ಹಾಗೂ ಸಂದೇಶವನ್ನು ತಿಳಿಸಿದರು.
ಅಲ್ಲದೆ ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಪಾತ್ರವನ್ನು ಕುರಿತು ವಿವೇಕಾನಂದರು ಬಾಲ್ಯದಲ್ಲಿ ಏನಾಗಬೇಕೆಂದು ಬಯಸಿದಾಗ ಅವರ ತಾಯಿ ರಥದಲ್ಲಿ ಕುಳಿತಿರುವ ಕೃಷ್ಣಾರ್ಜುನರ ಭಾವಚಿತ್ರವನ್ನು ತೋರಿಸಿ ಜಗತ್ತಿಗೆ ಮಾರ್ಗದರ್ಶಿಸುವ ಕೃಷ್ಣನಂತೆ ಆಗಬೇಕೆಂದು ಹೇಳಿದರು.
ಶಾಲೆಯ ಸಮಾಜ ವಿಜ್ಞಾನದ ವಿಭಾಗದ ಮುಖ್ಯಸ್ಥೆ ಸುಜಾತಾ ಗುಡ್ಡೊಡಗಿ ಅವರು ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ವೇದ ಅಕಾಡೆಮಿ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ


