17 ರಂದು ಬಾನು ಮುಷ್ತಾಕ್ ಅವರ ಬರಹಗಳ ಕುರಿತು ವಿಚಾರ ಸಂಕಿರಣ.

ಸಪ್ತಸಾಗರ ವಾರ್ತೆ, ವಿಜಯಪುರ, ಜು. 15:
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ವಿಜಯಪುರ ಇವರುಗಳ ಸಹಯೋಗದಲ್ಲಿ ಅಂತರರಾಷ್ಟ್ರೀಯ ಭೂಕರ್ ಪ್ರಶಸ್ತಿ ಪಡೆದ ಡಾ. ಬಾನು ಮುಷ್ಕಾಕ್ ಅವರ ಬರಹಗಳ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಜು.17 ಬೆಳಿಗ್ಗೆ 11 ಗಂಟೆಗೆ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾಹಿತಿಗಳು ಹಾಗೂ ಡಿವಾಯ್ಎಸ್ಪಿ ಬಸವರಾಜ ಯಲಿಗಾರ ಉದ್ಘಾಟಿಸುವರು.
ಸಂಸ್ಥೆಯ ಅಧ್ಯಕ್ಷ ಸಜ್ಜಾದೆ ಪೀರಾ ಮುಶ್ರೀಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ವಿಷಯ ನಿರೂಪಕರಾಗಿ ಸಾಹಿತಿಗಳಾದ ಡಾ. ಮುರ್ತುಜಾಬೇಗಂ ಕೊಡಗಲಿ, ಡಾ. ಶಿವಾನಂದ ಕೆಲೂರ ಆಗಮಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರುಗಳಾದ ಡಾ. ಸಿದ್ಧರಾಮ ಹೊನಕಲ್, ಮಹಾದೇವ ಬಸರಕೋಡ ಉಪಸ್ಥಿತರಿರುವರೆಂದು ಅಕಾಡೆಮಿಯ ಸದಸ್ಯ ಸಂಚಾಲಕ ಶಂಕರ ಬೈಚಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this