ಟೈಕೊಂಡೊ ಸ್ಫರ್ಧೆ: ರಾಜ್ಯ ಮಟ್ಟಕ್ಕೆ ಆಯ್ಕೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 18: ಇಲ್ಲಿನ ಕೆ.ಬಿ.ಎಸ್ ನಂ. ೫ರ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಟೈಕೊಂಡೊ ಸ್ಫರ್ಧೆಯಲ್ಲಿ ಎಕ್ಸಲಂಟ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನಗರ ಹೊರವಲಯದಲ್ಲಿ ಇರುವ ಇಟ್ಟಂಗಿಹಾಳ ರಸ್ತೆಯ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ಕುಮಾರಿ ನೀಲವೇಣಿ ಕಾವೇಕರ ಅವರು ೩೮ ಕೆ.ಜಿ. ಟೈಕೊಂಡದಲ್ಲಿ ಪ್ರಥಮ ಸ್ಥಾನ, ೫೯ಕೆ.ಜಿ ಟೈಕೊಂಡದಲ್ಲಿ ಪುಷ್ಪಾ ರಾಠೋಡ ಪ್ರಥಮ ಸ್ಥಾನ ಪಡೆದು ಧಾರವಾಡದಲ್ಲಿ ನಡೆಯುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಕೆಲೂರ, ಮುಖ್ಯ ಗುರುಗಳಾದ ತುಳಜಾರಾಮ ಸುಕ್ತೆ, ಶ್ರೀಶೈಲ ಹೆಗಳಾಡಿ, ತರಬೇತಿದಾರರಾದ ಗೌರೀಶ ಕಟ್ಟಿಮನಿ ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

Share this