ಬಿ.ಎಲ್. ಡಿ. ಇ. ಫ. ಗು. ಹಳಕಟ್ಟಿ ಎಂಜಿನೀಯರಿಃಗ್ ಕಾಲೇಜಿಗೆ 28ನೇ ರ‍್ಯಾಂಕ್
ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 28:ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿಗೆ ದೇಶದ ಅತ್ಯುನ್ನತ 175 ಕಾಲೇಜುಗಳಲ್ಲಿ 28ನೇ ರ‍್ಯಾಂಕ್ ಲಭಿಸಿದೆ.ನ್ಯಾಷನಲ್ ಟೈಮ್ಸ್ ಎಂಜಿನಿಯರಿಂಗ್ ರ‍್ಯಾಂಕಿಂಗ್ ನಡೆಸಿದ ಸಮೀಕ್ಷೆಯಲ್ಲಿ ಈ ಸ್ಥಾನ ಸಿಕ್ಕಿದೆ. ಈ ಸಂಸ್ಥೆ ದೇಶದ ನಾನಾ ಎಂಜಿನಿಯರಿಂಗ್ ಕಾಲೇಜುಗಳ ಸಮೀಕ್ಷೆ ನಡೆಸಿದ್ದು, ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜು ನಾನಾ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದೆ.ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗ ವ್ಯವಸ್ಥೆ ಮಾಡುವಲ್ಲಿ ದೇಶದ ಉನ್ನತ 70 ಖಾಸಗಿ…


