7 ಜನ ಕೊಲೆ ಆರೋಪಿತರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 50,000 ರೂ. ದಂಡ

ಸಪ್ತಸಾಗರ ವಾರ್ತೆ ವಿಜಯಪುರ, ಡಿ. 6:ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರದಲ್ಲಿ ನಡೆದ ಭೀಮನಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನ ಆರೋಪಿತರಿಗೆ ಜೀವಾವದಧಿ ಶಿಕ್ಷೆ ಹಾಗೂ ತಲಾ ಐವತ್ತು ಸಾವಿರ ರೂಪಾಯಿ ದಂಡ ವಿಧಿಸಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.ಮನೆ ಮುಂದಿನ ಖುಲ್ಲಾ ಜಾಗೆ ಸಲುವಾಗಿ ದಾಯಾದಿಗಳ ಮಧ್ಯೆ ಮೇಲಿಂದ ಮೇಲೆ ಕಲಹ ಉಂಟಾಗುತ್ತಿತ್ತು. 9-10-2013ರಂದು ಈ ಸಂಬಂಧ ಕಲಹ ವಿಕೋಪಕ್ಕೆ ಹೋಗಿ ಭೀಮನಗೌಡ ನಿಂಗನಗೌಡ ಪಾಟೀಲ ಹಾಗೂ ಆತನ ಸಹೋದರರಾದ…

Read More

ಕನ್ನೂರ ಜೋಡಿ ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ, ಪರಾರಿಯಾಗಲು ಯತ್ನಿಸಿದ ಓರ್ವ ಆರೋಪಿ ಮೇಲೆ ಫೈರಿಂಗ್

ಸಪ್ತಸಾಗರ ವಾರ್ತೆ,ವಿಜಯಪುರ, ಅ. 14: ತಾಲೂಕಿನ ಕನ್ನೂರು ಗ್ರಾಮದಲ್ಲಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪೊಲೀಸರ ಮೇಲೆ ಬೈಕ್ ಹಾಯಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.ಸಾಗರ ಬೆಳ್ಳುಂಡಗಿ ಹಾಗೂ ಇಸಾಕ್ ಖರೇಷಿ ಕೊಲೆ ಮಾಡಿದ ಆರೋಪಿಗಳ ಪೈಕಿ ಒಟ್ಟು ಐದು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.ಆರೋಪಿ ಅಕ್ಷಯ ಶಿವಾನಂದ ಜುಲಜುಲೆ ಪೊಲೀಸರ ಮೇಲೆ ಬೈಕ್ ಹಾಯಿಸಿ ಪರಾರಿಯಾಗಲು ಯತ್ನ ನಡೆಸಿದ.ಆಗ ವಿಜಯಪುರ…

Read More

ಬ್ಯಾಂಕ್ ದರೋಡೆ: ಶೀಘ್ರದಲ್ಲಿ ಆರೋಪಿಗಳ ಬಂಧನ- ಎಸ್ಪಿ ನಿಂಬರಗಿ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 17:ಚಡಚಣ ಎಸ್ ಬಿ ಐ ಬ್ಯಾಂಕ್ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಲಾಗಿದ್ದು, ಶೀಘ್ರದಲ್ಲಿ ದರೋಡೆಕೋರರನ್ನು ಪತ್ತೆ ಹಚ್ಚಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.ಝಳಕಿ ಪ್ರವಾಸಿ ಮಂದಿರದಲ್ಲಿ ಸುದ್ದಿದಾರರಿಗೆ ಮಾಹಿತಿ ನೀಡಿ, ನಿನ್ನೆ ಸಾಯಂಕಾಲ6-30‌ ರಿಂದ 7-30 ರ ವೇಳೆ ದರೋಡೆ ನಡೆದಿದೆ. ಬ್ಯಾಂಕ್ ಕ್ಲೋಜಿಂಗ್ ಟೈಂನಲ್ಲಿ ಘಟನೆ ನಡೆದಿದೆ.ದರೋಡೆಕೋರರ ಪೈಕಿ ಒಬ್ಬ ವ್ಯಕ್ತಿ ಬ್ಯಾಂಕ್ ಖಾತೆ ಮಾಡುವ ನೆಪದಲ್ಲಿ ಬಂದು ಬ್ಯಾಂಕಿನ ಒಳಗಡೆ ಕುಳಿತಿದ್ದ.ಬ್ಯಾಂಕ್ ಕ್ಲೋಜಿಂಗ್ ಟೈಂನಲ್ಲಿ…

Read More

ಮನೆ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 12:ಜಿಲ್ಲೆಯ ಅಲಮೇಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಒಟ್ಟು 10,69,500 ರೂ. ಮೌಲ್ಯದ ಚಿನ್ನ ಬೆಳ್ಳಿ ಹಾಗೂ ನಗದು ಜಪ್ತಿ ಮಾಡಿಕೊಂಡಿದ್ದಾರೆ.ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದ ಶರಣಬಸು ಜಾಲವಾದ, ಪ್ರಕಾಶ ಕಂಬಾರ ಬಂಧಿತ ಆರೋಪಿಗಳು.ಬಂಧಿತ ಆರೋಪಿತರಿಂದ 8,60,000 ಮೌಲ್ಯದ 86 ಗ್ರಾಂ. ಬಂಗಾರದ ಆಭರಣಗಳು,67,000 ಮೌಲ್ಯದ 67 ಗ್ರಾಂ ಬೆಳ್ಳಿ ಆಭರಣ ಹಾಗೂ ರೂ. 1,25,000 ಮೌಲ್ಯದ 5…

Read More

ಮನೆ ಕಳ್ಳತನ ಪ್ರಕರಣ: ಮೂವರು ಆರೋಪಿಗಳ ಬಂಧನ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 11:ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ ಪೊಲೀಸರು 65 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.ಝಂಡಾ ಕಟ್ಟಾ ಜೆ ಎಂ ರೋಡ ಹಳಕೇರಿ ಗಲ್ಲಿ ನಿವಾಸಿ ಸಮೀರ ಇನಾಮದಾರ, ಶಾಪೇಠಿ ಅಪ್ಸರಾ ಟಾಕೀಸ್ ಹತ್ತಿರ ಸುಹಾಗ ಕಾಲನಿ ನಿವಾಸಿ ಹಸನಡೊಂಗ್ರಿ ಮುಲ್ಲಾ, ನಿಸ್ಸಾರ ಮಡ್ಡಿ ನಿವಾಸಿಶಫೀಕ್ ಅಹ್ಮದ ಇನಾಮದಾರ ಬಂಧಿತ ಆರೋಪಿಗಳು.ಆರೋಪಿತರು ಅನುಮಾನಾಸ್ಪದವಾಗಿ ತಿರುಗಾಡುವಾಗ ಹಿಡಿದು ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿ ಒಟ್ಟು ಮೂರು ಜನರು ಸೇರಿಕೊಂಡು ಮನೆಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ….

Read More