ವಿಕಸಿತ ಭಾರತಕ್ಕಾಗಿ ತಪ್ಪದೇ ಮತದಾನ ಮಾಡಿ: ಡಾ ಔದ್ರಾಮ, ಅಪರ ಜಿಲ್ಲಾಧಿಕಾರಿಗಳು
ಸಪ್ತಸಾಗರ ವಾರ್ತೆ, ವಿಜಯಪುರ, ಜ. 29: ಪ್ರತಿಯೊಂದು ಮತದಾನ ದೇಶಕಟ್ಟುವ ಮಹಾತ್ ಕಾರ್ಯಕ್ಕೆ ಮುನ್ನುಡಿ ಎಂದುವಿಜಯಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಡಾ. ಔದ್ರಾಮ ಅವರು ತಿಳಿಸಿದ್ದಾರೆ.ಭಾರತ ಸರ್ಕಾರದ ಮೇರಾ ಯುವ ಭಾರತ ಕೇಂದ್ರ, ಜಿಲ್ಲಾಡಳಿತ, ಕೇಂದ್ರ ಸಂವಹನ ಇಲಾಖೆ, ಬಿ ಎಲ್ ಡಿ ಇ ಎ ಜೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯ, ಎನ್‌ಎಸ್‌ಎಸ್ ಘಟಕ, ಭಾರತ ಸೇವಾ ದಳ, ರೆಡ್ ಕ್ರಾಸ್ ಘಟಕ, ವಿಜಯಪುರ ಮತ್ತು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸಾಂಸ್ಕ್ರತಿಕ ಕ್ರೀಡಾ ಹಾಗೂ ಸಾಮಾಜಿಕ ಶ್ರೇಯೋಭಿವೃದ್ಧಿ…


