ಕುಡಿತದ ವ್ಯಸನದಿಂದ ಹೊರಬಂದು ಸಮಾಜದ ಮುಖ್ಯ ವಾಹಿನಿಗೆ ಬನ್ನಿ: ದಾನೇಶ ಅವಟಿ
ಸಪ್ತಸಾಗರ ವಾರ್ತೆ, ವಿಜಯಪುರ, ಜು. 20:ಕುಡಿತದ ವ್ಯಸನದಿಂದ ಹೊರಬಂದು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ನ್ಯಾಯವಾದಿ ದಾನೇಶ ಅವಟಿ ಜನತೆಗೆ ಕರೆ ನೀಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಗರದ ಆಶ್ರಮ ಹತ್ತಿರ. ಕಾಳಿಕಾ ನಗರದ ಶ್ರೀ ಮೌನೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಏರ್ಪಡಿಸಿದ. 1953 ನೇ ಮದ್ಯವರ್ಜನ ಶಿಬಿರದ ಪ್ರಮುಖ ಉಪನ್ಯಾಸಕರಾಗಿ ಮಾತನಾಡಿದರು.ಸಪ್ತವ್ಯಸನಗಳಲ್ಲಿ ಒಂದಾದ ಮದ್ಯಪಾನವು ಮಾನವ ಕುಲಕ್ಕೆ ಅಂಟಿದ ಬಹುದೊಡ್ಡ ಮಹಾಶಾಪ. ಮದ್ಯಪಾನ ವ್ಯಸನಕ್ಕೀಡಾದ ವ್ಯಕ್ತಿಯ ಆರೋಗ್ಯ, ಕುಟುಂಬ, ಆರ್ಥಿಕ, ಸಾಮಾಜಿಕ…


