ಅಮೆರಿಕ ಯುನಿವರ್ಸಿಟಿ- ಬಿಎಲ್ಡಿಇ ಡೀಮ್ಡ್ ವಿವಿ ಜೊತೆಗೆ ಒಡಂಬಡಿಕೆ
ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 28:ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಅಮೇರಿಕದ ಯುನಿವರ್ಸಿಟಿ ಆಫ್ ಇಲಿನಾಯಿಸ್ ಚಿಕ್ಯಾಗೊ ನಡುವೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.ಕಳೆದ ಮಾರ್ಚ್ ತಿಂಗಳಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಅರುಣ ಚಂ. ಇನಾಮದಾರ ಅವರು ಅಮೇರಿಕಕ್ಕೆ ತೆರಳಿದ್ದರು. ಅಲ್ಲಿ ಇಲಿನಾಯಿಸ ವಿಶ್ವವಿದ್ಯಾಲಯ, ಚಿಕ್ಯಾಗೊ ಅಂತರಾಷ್ಟೀಯ ಆರೋಗ್ಯ ವಿಭಾಗದ ಅಸೋಶಿಯೇಟ ಡೀನ ಡಾ. ಪ್ರಭಾಕರ ಬೆಳ್ಳೂರ ಅವರೊಂದಿಗೆ ಈ ಒಡಂಬಡಿಕೆ ಕುರಿತು ಚರ್ಚಿಸಿದ್ದರು. ಈಗ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಒಡಂಬಡಿಕೆಯಿಂದಾಗಿ ಎರಡೂ ವಿಶ್ವವಿದ್ಯಾಲಯಗಳು ಶೈಕ್ಷಣಿಕ…


