
ಸಾಹಿತಿ ಮಧುರಚೆನ್ನರ 122ನೇ ಜನ್ಮ ದಿನ ಆಚರಣೆ
ಸಪ್ತಸಾಗರ ವಾರ್ತೆ, ವಿಜಯಪುರ, ಜು. 31:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನ ವತಿಯಿಂದ ಮಧುರಚೆನ್ನರ 122ನೇ ಜನ್ಮ ದಿನಾಚರಣೆಯನ್ನು ಗುರುವಾರ ಹಲಸಂಗಿ ಗ್ರಾಮದ ಶ್ರೀ ಅರವಿಂದ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು.ಕಾರ್ಯಕ್ರಮವನ್ನು ಹಲಸಂಗಿಯ ಎಸ್.ಎ.ವಿ.ವಿ. ಸಂಘದ ಅಧ್ಯಕ್ಷ ಅರವಿಂದ ಮನಮಿ ಉದ್ಘಾಟಿಸಿದರು. ಅರವಿಂದ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ಬಿ. ತಿಕೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಇಂಡಿ ವಿಭಾಗದ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಮಾತನಾಡಿ, ಸಂವಿಧಾನ ನಮಗೆಲ್ಲ ಸಮನಾದ…