
ಖರ್ಗೆ ಪ್ರಧಾನಿಗೆ ಕ್ಷಮೆ ಯಾಚಿಸಬೇಕು: ಸಂಸದ ಜಿಗಜಿಣಗಿ ಒತ್ತಾಯ
ಸಪ್ತಸಾಗರ ವಾರ್ತೆ, ಜು. 21:ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏಕವಚನ ಪದ ಬಳಕೆ ಮಾಡಿರುವುದು ಅತ್ಯಂತ ಖಂಡನೀಯ. ಕೂಡಲೆ ಖರ್ಗೆಯವರು ಪ್ರಧಾನಿ ಕ್ಷಮೆ ಕೇಳಬೇಕೆಂದು ಸಂಸದ ರಮೇಶ ಜಿಗಜಿಣಗಿ ಅವರು ಒತ್ತಾಯಿಸಿದ್ದಾರೆ.ಇಡೀ ವಿಶ್ವದ ನಾಯಕರೇ ಅತ್ಯಂತ ಗೌರವ ತೋರುವ ಶ್ರೇಷ್ಠ ವ್ಯಕ್ತಿತ್ವ ಹೊಂದಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏಕ ವಚನ ಪದ ಪ್ರಯೋಗಿಸಿ ಟೀಕೆ ಮಾಡುತ್ತಿರುವುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶೋಭೆ ತರುವುದಿಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಪತ್ರಿಕಾ ಹೇಳಿಕೆಯಲ್ಲಿ…