
ನಾನಾ ಕ್ಷೇತ್ರಗಳ ಗಣ್ಯರ ವಿಜನ್ ಗ್ರುಪ್ ರಚನೆ: ಸದಸ್ಯರಾಗಿ ಡಾ. ಬಿರಾದಾರ ನೇಮಕ
ಸಪ್ತ ಸಾಗರ ವಾರ್ತೆ, ವಿಜಯಪುರ, ಸೆ. 24: ರಾಜ್ಯ ಧಾರ್ಮಿಕ ಇಲಾಖೆ ವ್ಯಾಪ್ತಿಯ ಐತಿಹಾಸಿಕ ದೇವಾಲಯಗಳ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ನಾನಾ ಕ್ಷೇತ್ರಗಳ ಗಣ್ಯರ ವಿಜನ್ ಗ್ರುಪ್ ರಚಿಸಲಾಗಿದ್ದು, ಸಮಿತಿಯ ಸದಸ್ಯರಾಗಿ ಡಾ. ಮಹಾಂತೇಶ ಬಿರಾದಾರ ಅವರನ್ನು ನೇಮಕ ಮಾಡಲಾಗಿದೆ. ಇವರು ಉತ್ತರ ಕರ್ನಾಟಕದ ಏಕೈಕ ಪ್ರತಿನಿಧಿಯಾಗಿದ್ದಾರೆ.ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆಗಿರುವ ಡಾ. ಮಹಾಂತೇಶ ಬಿರಾದಾರ ಅವರನ್ನು ಏಳು ಜನ ಸದಸ್ಯರನ್ನು ಹೊಂದಿರುವ ವಿಜನ್ ಗ್ರುಪ್ ಸದಸ್ಯರನ್ನಾಗಿ ಧಾರ್ಮಿಕ ಇಲಾಖೆ ಆಯುಕ್ತರು…