ಗುಂಟಾ ಪ್ಲಾಟ್‌ಗಳಿಗೆ ವಿದ್ಯುತ್ ಮೀಟರ್ ನೀಡದ ಸರ್ಕಾರದ ಕ್ರಮ ಖಂಡನೀಯ: ಅಪ್ಪುರಾಜ್ ನಿಮಾದಾರ
ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 17:ಕರ್ನಾಟಕ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಗುಂಟಾ ಪ್ಲಾಟ್‌ಗಳಿಗೆ ವಿದ್ಯುತ್ ಮೀಟರ್‌ಗಳನ್ನು ನೀಡದೇ ಇರುವ ಸರ್ಕಾರದ ನೀತಿಯನ್ನು ಭೀಮ್ ರಾಜ್ಯ ದಲಿತ ಸೇವಾ ಸಮಿತಿ (ರಿ) ರಾಜ್ಯಾಧ್ಯಕ್ಷ ಅಪ್ಪುರಾಜ್ ನಿಮಾದಾರ ತೀವ್ರವಾಗಿ ಖಂಡಿಸಿದ್ದಾರೆ.ರಾಜ್ಯದ ವಿವಿಧ ಭಾಗಗಳಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರು ತಮ್ಮ ಜೀವನಪೂರ್ತಿ ದುಡಿದು ಖರೀದಿಸಿರುವ ಸಣ್ಣ-ಸಣ್ಣ ಗುಂಟಾ ಪ್ಲಾಟ್‌ಗಳಲ್ಲಿ ಮನೆ ನಿರ್ಮಿಸಿ ವಾಸಿಸಲು ಮುಂದಾಗಿದ್ದಾರೆ. ಆದರೆ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದರೂ ಮೀಟರ್ ನೀಡದೇ ಅಧಿಕಾರಿಗಳು ಹಾಗೂ ಸರ್ಕಾರ…


