ಅರ್ಕಾಟ್ ದರ್ಗಾ ಉರುಸು: ವಿಜಯಪುರದಲ್ಲಿ ಭವ್ಯ ಸದ್ಭಾವನಾ ಯಾತ್ರೆ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 23:ಮಾನವೀಯತೆ, ಶಾಂತಿ ಹಾಗೂ ಸದ್ಭಾವನೆಯ ಸಂದೇಶ ಸಾರಿದ ಹಜರತ್ ಗೌಸ್-ಏ-ಆಜಂ ಅವರ ಸ್ಮರಣೆ ಹಾಗೂ ಸರ್ವಧರ್ಮ ಸಮನ್ವಯತೆಯ ಕೇಂದ್ರವಾಗಿರುವ ಐತಿಹಾಸಿಕ ಹಜರತ್ ಅರ್ಕಾಟ್ ದರ್ಗಾದ ಉರುಸು ಅಂಗವಾಗಿ ಬುಧವಾರ ನಗರದಲ್ಲಿ ಭವ್ಯ ಭಕ್ತಿ-ಸದ್ಭಾವನಾ ಯಾತ್ರೆ ನಡೆಯಿತು.ಸಾವಿರಾರು ಭಕ್ತರು ‘ನಾರಾಯೇ ತಕ್ಬೀರ್, ಅಲ್ಲಾಹು ಅಕ್ಬರ್’ ಘೋಷಣೆ ಮೊಳಗಿಸುತ್ತಾ, ಪವಿತ್ರ ಧ್ವಜಗಳನ್ನು ಹಿಡಿದು ಯಾತ್ರೆಯಲ್ಲಿ ಪಾಲ್ಗೊಂಡರು. ಪವಿತ್ರ ಪುಷ್ಪಗಳಿಂದ ಅಲಂಕರಿಸಲಾದ ಪಂಚ ಝೇಲಾಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಿದ್ದವು.ಜಾಮೀಯಾ ಮಸೀದಿ, ಶಹಾಪೇಟಿ, ಶಹಾಪುರ ದರ್ವಾಜಾ, ಮದೀನಾ ನಗರ,…

Read More