ಮಕ್ಕಳ ಚಿತ್ರಕಲಾ ಪ್ರದರ್ಶನ, ಬಹುಮಾನ ವಿತರಣೆ
ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 23:ಪ್ರವಾಸೋದ್ಯಮ ಇಲಾಖೆಯ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ವಿಜಯಪುರದ ಅಪ್ಪ ಫೌಂಡೇಶನ್ ವತಿಯಿಂದ ಮಕ್ಕಳ ಚಿತ್ರಕಲಾ ಪ್ರದರ್ಶನ ಹಾಗೂ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ರೇಖಾಚಿತ್ರ ರಚಿಸುವ ಮೂಲಕ ಕಲಾವಿದ ಸತೀಶ್ ಹಿರೇಮಠ ಉದ್ಘಾಟಿಸಿದರು. ಶಿಕ್ಷಕ ಟಿ.ವಿ. ಮಲಗೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎನ್.ಎ. ಚಿಮ್ಮಲಗಿ ಮಾತನಾಡಿ, ಅಪ್ಪ ಫೌಂಡೇಶನ್ನ ಉದ್ದೇಶ ಹಾಗೂ ಮಕ್ಕಳಿಗಾಗಿ ನಡೆಸುತ್ತಿರುವ ವಿವಿಧ ಚಟುವಟಿಕೆಗಳ ಕುರಿತು ವಿವರಿಸಿದರು. ‘ಅಪ್ಪ’ ಎಂಬುದು ಕೇವಲ ಒಂದು…


