ಪ್ರೊ. ರೇವಣಸಿದ್ದ ಮೇತ್ರಿಯವರಿಗೆ ಪಿ.ಎಚ್. ಡಿ
ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 29:ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಪಿ.ಜಿ.ಹಳಕಟ್ಟಿ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಗಣಿತ ವಿಭಾಗದ ಅಧ್ಯಾಪಕ ಪ್ರೊ. ರೇವಣಸಿದ್ದ ಶಂಕ್ರೆಪ್ಪ ಮೇತ್ರಿ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ” ಎಫೆಕ್ಟ್ ಆಪ್ ಪೊರಾಸಿಟಿ ಆನ್ ಪೆರಿಸ್ಟಾಲ್ಟಿಕ್ ಪ್ಲೊ ಆಪ್ ನಾನ್ – ನ್ಯೂಟೋನಿಯನ್ ಪ್ಲುಡ್ ಮಾಡೆಲ್.’” ಎಂಬ ಶೀರ್ಷಿಕೆಯ ಅವರ ಪ್ರಬಂಧವನ್ನು ಗಣಿತ ವಿಭಾಗದ ಪ್ರಾಧ್ಯಾಪಕ ಡಾ. ಗುರುನಾಥ ಸಂಕದ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಲಾಯಿತು.ಪ್ರಾಂಶುಪಾಲರಾದ ಡಾ. ಮಂಜುನಾಥ…


