ವಲಯ ಮಟ್ಟದ ಕ್ರೀಡಾಕೂಟದಲ್ಲಿ ಹಳಕಟ್ಟಿ ಶಾಲಾ ಮಕ್ಕಳ ಮಿಂಚಿನ ಸಾಧನೆಕಬಡ್ಡಿಯಲ್ಲಿ ಪ್ರಥಮ, ಹಲವು ಸ್ಪರ್ಧೆಗಳಲ್ಲಿ ಪ್ರಶಸ್ತಿ; ತಾಲೂಕು ಮಟ್ಟಕ್ಕೆ ಆಯ್ಕೆ

ಸಪ್ತಸಾಗರ ವಾರ್ತೆ,ಆಲಮಟ್ಟಿ, ಸೆ. 16: ನಿಡಗುಂದಿ ‘ಎ’ ವಲಯ ಮಟ್ಟದ 2026-27ನೇ ಸಾಲಿನ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಆಲಮಟ್ಟಿಯ ಎಸ್.ವಿ.ವಿ. ಸಂಸ್ಥೆಯ ರಾವಬಹದ್ದೂರ ಡಾ. ಫ.ಗು. ಹಳಕಟ್ಟಿ (ಆರ್.ಬಿ.ಪಿ.ಜಿ.) ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.ಶಾಲಾ ಶಿಕ್ಷಣ ಇಲಾಖೆ, ವಿಜಯಪುರ ಜಿಲ್ಲಾ ಪಂಚಾಯತ್ ಹಾಗೂ ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಗಳ ಸಹಯೋಗದಲ್ಲಿ, ನಿಡಗುಂದಿ ಬಿ.ಎಂ.ಎಸ್. ಪಬ್ಲಿಕ್ ಸ್ಕೂಲ್ ಆತಿಥ್ಯದಲ್ಲಿ ಆರ್.ಬಿ.ಪಿ.ಜಿ. ಹಳಕಟ್ಟಿ ಪ್ರೌಢಶಾಲಾ ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕಬಡ್ಡಿಯಲ್ಲಿ ಜಯಭೇರಿ ಬಾಲಕರ…

Read More

ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 11:ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಗುತ್ತಿದೆ. ಆದರಂತೆ 2026ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕ ಗಳಿಸಿರುವ ರಾಜ್ಯ ಸರ್ಕಾರಿ ನೌಕರರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಜಿ ಸಲ್ಲಿಸಲು ಶೇ. 90…

Read More

ನೈಋತ್ಯ ರೈಲ್ವೆಯ 70ನೇ ರೈಲ್ವೆ ಸಪ್ತಾಹ ಆಚರಣೆ: ಸಾಧಕ ನೌಕರರು ಮತ್ತು ಘಟಕಗಳಿಗೆ ಪ್ರಶಸ್ತಿ ಪ್ರದಾನ

ಸಪ್ತಸಾಗರ ವಾರ್ತೆ, ಹುಬ್ಬಳ್ಳಿ, ಜ. 24:ನೈಋತ್ಯ ರೈಲ್ವೆಯು ತನ್ನ 70ನೇ ರೈಲ್ವೆ ಸಪ್ತಾಹವನ್ನು ನಗರದ ಗದಗ ರಸ್ತೆಯಲ್ಲಿರುವ ಚಾಲುಕ್ಯ ರೈಲ್ವೆ ಸಂಸ್ಥೆಯಲ್ಲಿ ಇಂದು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಸೇವೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ನೌಕರರು ಹಾಗೂ ಅತ್ಯುತ್ತಮ ಪ್ರದರ್ಶನ ನೀಡಿದ ವಿವಿಧ ವಿಭಾಗಗಳಿಗೆ ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು.ಕಾರ್ಮಿಕ ಅಧಿಕಾರಿ ಸೂರ್ಯ ಪ್ರಕಾಶ್ ಅವರು ಕಾರ್ಯಕ್ರಮದ ಸ್ವಾಗತ ಭಾಷಣ ಕೋರಿದರು. ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಅವರು ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು,…

Read More

ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿಗೆ ರಾಜ್ಯ ಮಟ್ಟದ ಸಾಧಕಿ ಪ್ರಶಸ್ತಿ

ಸಪ್ತಸಾಗರ ವಾರ್ತೆ, ವಿಜಯಪುರ, ನ. 17: ವಿಜಯಪುರ ಜಿಲ್ಲಾ ಸಾಂಸ್ಕ್ರತಿಕ ವೇದಿಕೆ ವತಿಯಿಂದ ಇತ್ತೀಚೆಗೆ ನಗರದ ಕಂದಗಲ್ಲ ಹನಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನಾಡಗೀತೆ ನೂರರ ಸಂಭ್ರಮ ಕಾರ್ಯಕ್ರಮದಲ್ಲಿ ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಅವರಿಗೆ ರಾಜ್ಯ ಮಟ್ಟದ ಸಾಧಕಿ ಪ್ರಶಸ್ತಿ ಲಭಿಸಿದೆ.ಪ್ರೊ.ವಿಜಯಾ ಕೋರಿಶೆಟ್ಟಿ ಅವರು ಕಳೆದ ಮೂರು ದಶಕಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿ ಹೆಜ್ಜೆ ಗುರುತು ಮೂಡಿಸಿದ್ದಾರೆ. ಸಮಾಜಮುಖಿ ಬದುಕಿಗೆ ಮಾದರಿಯಾಗಿರುವ ಅವರ ಅನುಪಮ ಮತ್ತು ಅಮೋಘ ಸೇವೆಯನ್ನು ಪರಿಗಣಿಸಿ ಈ…

Read More

ಮಳಸಿದ್ದ ನಾಯ್ಕೋಡಿಗೆ ರಾಜ್ಯ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ‌ ಪ್ರಶಸ್ತಿ

ಸಪ್ತ ಸಾಗರ ವಾರ್ತೆ ವಿಜಯಪುರ, ಅ. 6: ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ‌ ಪ್ರಶಸ್ತಿಗೆ ಮಳಸಿದ್ದ ಲಕ್ಷ್ಮಣ ನಾಯ್ಕೋಡಿ ಅವರು ಭಾಜನರಾಗಿದ್ದಾರೆ.ಅವರನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಸೋಮವಾರ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಸಮಾಜ‌ ಕಲ್ಯಾಣ ಇಲಾಖೆಯ‌ ಉಪ‌ ನಿರ್ದೇಶಕ ಮಹೇಶ ಪೋತದಾರ, ಇಲಾಖೆಯ ಟಿ.ವಿ ಮಂಟೂರ, ಡಾ. ಅರವಿಂದ ಲಂಬೂ, ಎಂ.ಟಿ. ಬಿರಾದಾರ, ಆನಂದ‌ ಕಳಸಗೊಂಡ‌ ಸೇರಿದಂತೆ ಇಲಾಖಾ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.

Read More

ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ಸಪ್ತಸಾಗರ ವಾರ್ತೆ, ವಿಜಯಪುರ,ಸೆ.2 :ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ‌ಯ ವತಿಯಿಂದ ಬಾಲಕರಿಗಾಗಿ ಹೊಯ್ಸಳ ಮತ್ತು ಬಾಲಕಿಯರಿಗಾಗಿ ಕೆಳದಿ ಚನ್ನಮ್ಮ ಪ್ರಶಸ್ತಿಗಾಗಿ ನಾವೀನ್ಯತೆ,ತಾರ್ಕಿಕ ಸಾಧನೆಗಳು,ಕ್ರೀಡೆ,ಕಲೆ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಪ್ರತಿ ಕ್ಷೇತ್ರದಿಂದ ಇಬ್ಬರು ಮಕ್ಕಳಂತೆ ಎಂಟು ಮಕ್ಕಳನ್ನು ಆಯ್ಕೆ ಮಾಡಲಾಗುವುದು.ಈ ಪ್ರಶಸ್ತಿಯು ತಲಾ ರೂ.10 ಸಾವಿರ ನಗದು ಬಹುಮಾನ ಒಳಗೊಂಡಿದ್ದು, 5 ರಿಂದ 18 ವರ್ಷದೊಳಗಿನ ಮಕ್ಕಳು ಅಗತ್ಯ ದಾಖಲೆ ಸಹಿತ ಸೆಪ್ಟೆಂಬರ್ 30…

Read More

ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 5: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದಿಂದ ಜಿಲ್ಲೆಯ ಛಾಯಾಗ್ರಾಹಕರ ಮಕ್ಕಳಿಗೆ ೨೦೨೪-೨೫ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ.೮೦ ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಛಾಯಾಗ್ರಾಹಕರ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಸಂಘದಿಂದ ಪ್ರತಿಭಾ ಪುರಸ್ಕಾರ ಮಾಡಲು ನಿರ್ಧರಿಸಲಾಗಿದೆ. ವಿಜಯಪುರ ಜಿಲ್ಲೆಯ ಎಲ್ಲ ತಾಲೂಕಿನ ಛಾಯಾಗ್ರಾಹಕರು ತಮ್ಮ ಮಕ್ಕಳ ಪ್ರಸಕ್ತ ಸಾಲಿನ ಶಾಲೆಯ ಧೃಢೀಕೃತ ಎಸ್.ಎಸ್.ಎಲ್.ಸಿ. ಮತ್ತು ಧೃಢೀಕೃತ ಕಾಲೇಜಿನ ದ್ವಿತೀಯ ಪಿ.ಯು.ಸಿ ಅಂಕಪಟ್ಟಿ, ಆಧಾರ ಕಾರ್ಡ್, ವಿದ್ಯಾರ್ಥಿಯ ಬ್ಯಾಂಕ್…

Read More