17ರಿಂದ 23ರ ವರೆಗೆ ಗುಮ್ಮಟನಗರಿಯಲ್ಲಿ ಬ್ಯಾಡ್ಮಿಂಟನ್ ಪಂದ್ಯ: 7 ದಿನಗಳವರೆಗೆ ಕ್ರೀಡಾ ಪ್ರೇಮಿಗಳಿಗೆ ಬ್ಯಾಡ್ಮಿಂಟನ್ ಆಕ್ಷನ್ ರಸದೌತಣ
ಸಪ್ತಸಾಗರ ವಾರ್ತೆ,ವಿಜಯಪುರ, ಮೇ 16:ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ (KBA) ಅಧಿಕೃತ ಮಾನ್ಯತೆಯೊಂದಿಗೆ, ಯೋನೆಕ್ಸ್ ಸನ್‌ರೈಸ್ ಪ್ರಾಯೋಜಕತ್ವದಲ್ಲಿ ರಾಜ್ಯ ಮಟ್ಟದ ಯು-15 ಮತ್ತು ಯು-17 ಬ್ಯಾಡ್ಮಿಂಟನ್ ಪಂದ್ಯಾವಳಿ-2026 ಮೇ 17 ರಿಂದ ಮೇ 23 ರವರೆಗೆ ಐತಿಹಾಸಿಕ ನಗರಿ ವಿಜಯಪುರದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಎಂದು ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಕುಮಾರ ಬಂಗಾರಪ್ಪ ತಿಳಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಾದ್ಯಂತ ಇರುವ ಉದಯೋನ್ಮುಖ ಹಾಗೂ ಖ್ಯಾತ ಬ್ಯಾಡ್ಮಿಂಟನ್ ಆಟಗಾರರು ತಮ್ಮ ಕೌಶಲ್ಯ ಪ್ರದರ್ಶಿಸಲು ವಿಜಯಪುರಕ್ಕೆ ಲಗ್ಗೆ…


