ಮಳೆ, ಗಾಳಿಗೆ ಅಪಾರ ಬಾಳೆ ಗಿಡ ನಾಶ
ಸಪ್ತಸಾಗರ ವಾರ್ತೆ, ಇಂಡಿ, ಮೇ24: ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಶನಿವಾರ ರಾತ್ರಿ ಸುರಿದ ಮಳೆಗಾಳಿಗೆ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಬಾಳೆ ಗಿಡಗಳು ಸಂಪೂರ್ಣ ನೆಲಕ್ಕುರುಳಿ ಲಕ್ಷಾಂತರ ರೂ. ಹಾನಿಯಾಗಿದೆ.ಗ್ರಾಮದ ರೈತ ಧರ್ಮರಾಯ ನರಳೆ ಅವರ 2055 ಬಾಳೆಗಿಡ ಹಾಗೂ ಧರೆಪ್ಪ ನರಳೆ ಅವರಿಗೆ ಸೇರಿದ 1950 ಬಾಳೆ ಗಿಡಗಳು ಮಳೆ ಹಾಗೂ ಗಾಳಿಗೆ ಸಂಪೂರ್ಣ ನೆಲಕ್ಕುರುಳಿ ಹಾಳಾಗಿವೆ. ಅಂದಾಜು 35ಲಕ್ಷದ ಫಸಲು ಹಾಳಾಗಿದೆ ಎಂದು ಅಂದಾಜಿಸಲಾಗಿದೆ.ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಹಂಜಗಿ ಅವರು ಭೇಟಿ ನೀಡಿ…


