ಯತ್ನಾಳ ವಿರುದ್ಧ ಸಚಿವ ಎಂ. ಬಿ. ಪಾಟೀಲ ವಾಗ್ಧಾಳಿ
Minister M. B. Patil launches a verbal attack against Yatnal.
Minister M. B. Patil launches a verbal attack against Yatnal.
Meeting in Belagavi on October 29 regarding the protest against the entry ban on Kanheri Shree.
ಸಪ್ತಸಾಗರ ವಾರ್ತೆ, ವಿಜಯಪುರ, ಅ. 8: ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ತುರ್ತು ಪರಿಹಾರಕ್ಕಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬುಧವಾರ ಪತ್ರ ಬರೆದು ಮನವಿ ಮಾಡಿದ್ದಾರೆ.ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹದಿಂದ ದೊಡ್ಡ ಪ್ರಮಾಣದಲ್ಲಿ ಹಾನಿ ಮತ್ತು ಸ್ಥಳಾಂತರಕ್ಕೆ ಕಾರಣವಾಗಿದೆ. ಭೀಮಾ ನದಿಯ ದಡದಲ್ಲಿ ಉಂಟಾದ ಭಾರಿ ಪ್ರವಾಹವು 10 ಲಕ್ಷ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟಕ್ಕೆ ಕಾರಣವಾಗಿದ್ದು, ರೈತರು ತಾವು ಬೆಳೆದ ಬೆಳೆಗಳು…
ಸಪ್ತಸಾಗರ ವಾರ್ತೆ ವಿಜಯಪುರ, ಸೆ. 24: ಜಾನಪದ ಗಾಯಕ, ತಂತಿ ವಾದ್ಯಗಳ ತಯಾರಕರಾದ ಏಕತಾರಿ ರಾಮಯ್ಯನವರ ಅವರಿಗೆ ರಾಜ್ಯ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು, ಮುಖ್ಯಮಂತ್ರಿಗಳಾದ ಸಿದ್ದರಾಯಯ್ಯನವರಿಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.ಬೆಂಗಳೂರಿನ ಗೊಲ್ಲಹಳ್ಳಿ ಹೋಬಳಿಯ ಕೆಂಚನಪಾಳ್ಯ ಗ್ರಾಮದ ನಿವಾಸಿಯಾಗಿರುವ ಜಾನಪದ ಗಾಯಕ ಏಕತಾರಿ ರಾಮಯ್ಯನವರು ತಮ್ಮ ಕಂಚಿನ ಕಂಠ ಹಾಗೂ ವಿಶಿಷ್ಟ ಪ್ರತಿಭೆಯ ಮೂಲಕ ಜಾನಪದ ಲೋಕಕ್ಕೆ ಸಾಕಷ್ಟು…
ಸಪ್ತಸಾಗರ ವಾರ್ತೆ ವಿಜಯಪುರ, ಸೆ. 20:ರಾಜ್ಯ ಸರ್ಕಾರದ ಜಾತಿ ಗಣತಿ ಸೋನಿಯಾ ಗಾಂಧಿ ಅಣತಿಯಂತೆ ನಡೆಯುತ್ತಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆರೋಪ ಮಾಡಿದ್ದಾರೆ.ವಿಜಯಪುರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಯತ್ನಾಳ,ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಒಕ್ಕಲಿಗ ಮಾಡಿದ್ದಾರೆ. ಇವೆಲ್ಲ ಸೋನಿಯಾ ಗಾಂಧಿ ಕೊಟ್ಟಿರುವ ಹೊಸ ಹೊಸ ನಾಮಾವಳಿ ಎಂದರು.ಕೆಲವರು ಕ್ರಿಶ್ಚಿಯನ್ ರಾಷ್ಟ್ರ, ಹಲವರು ಮುಸ್ಲಿಂ ರಾಷ್ಟ್ರ ಮಾಡಬೇಕೆನ್ನುತ್ತಾರೆ.ಈ ಹಿನ್ನಲೆ ಜಾತಿ ವರ್ಗೀಕರಣ ಮಾಡಿದ್ದಾರೆ. ಇವೆಲ್ಲಾ ಜಾತಿಗಳು ನಮ್ಮ ದೇಶದಲ್ಲಿ ಅಷ್ಟೇ…
ಸಪ್ತಸಾಗರ ವಾರ್ತೆ ವಿಜಯಪುರ, ಸೆ. 19: ಡಾ.ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳದ ಅನೇಕರು ಕೇವಲ ತಮ್ಮ ಸ್ವಾರ್ಥಕ್ಕಾಗಿ ಅಂಬೇಡ್ಕರ್ ಹೆಸರನ್ನು ಬಳಸುತ್ತಿದ್ದಾರೆ. ಆದರೆ, ಯತ್ನಾಳರು ಅಂಬೇಡ್ಕರ್ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ, ಅವರ ಜೀವನ ಚರಿತ್ರೆ, ದೇಶಕ್ಕೆ ನೀಡಿದ ಕೊಡುಗೆ, ಅವರ ಜೀವನದಲ್ಲಾದ ಅನ್ಯಾಯ ಬಗ್ಗೆ ವಿವರಿಸಿದಲ್ಲದೆ, ತಾವು ಅಂಬೇಡ್ಕರ್ ಅವರ ಅನುಯಾಯಿ ಎಂದು ಸದನದಲ್ಲೇ ಘೋಷಿಸಿದ್ದಾರೆ. ಅವರ ಏಳಿಗೆ ಸಹಿಸದೆ ಅಪಪ್ರಚಾರ ಮಾಡುತ್ತಿರುವುದಕ್ಕೆ ಪರಿಶಿಷ್ಟ ಸಮುದಾಯದ ಮುಖಂಡರು ಹಾಗೂ ವಿಡಿಎ ಮಾಜಿ ಸದಸ್ಯ ಮಡಿವಾಳ ಯಾಳವಾರ…
ಸಪ್ತಸಾಗರ ವಾರ್ತೆ ವಿಜಯಪುರ, ಸೆ. 18:ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರು ಕೊಪ್ಪಳದಲ್ಲಿ ದಲಿತ ಮಹಿಳೆಗೆ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಖಂಡಿಸಿ ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕ ಹಾಗೂ ಜಲನಗರ ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ಇತ್ತೀಚೆಗೆ ಕೊಪ್ಪಳದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರು ಸಾಮಾನ್ಯ ದಲಿತ ಮಹಿಳೆ ಕೂಡ ಚಾಮುಂಡಿಯ ಮುಡಿಗೆ ಹೂವನ್ನು ಮುಡಿಸಲು ಯೋಗ್ಯರಲ್ಲ. ಸನಾತನ ಧರ್ಮದವರು ಮಾತ್ರ…
ಸಿದ್ದಸಿರಿ ಸೌಹಾರ್ದ ಸಹಕಾರಿಯಿಂದ ರೂ.25 ಲಕ್ಷ ದೇಣಿಗೆಸಪ್ತಸಾಗರ ವಾರ್ತೆ ವಿಜಯಪುರ, ಸೆ. 15: ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಸಂಚಾರ ಕಮಾಂಡ್ ಕೇಂದ್ರ ಸ್ಥಾಪಿಸಲು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸಿದ್ದಸಿರಿ ಸೌಹಾರ್ದ್ ಸಹಕಾರಿ ಸಂಘ ನಿಯಮಿತದಿಂದ ರೂ.25 ಲಕ್ಷ ದೇಣಿಗೆ ಚೆಕ್ ನ್ನು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರಿಗೆ ಹಸ್ತಾಂತರಿಸಲಾಯಿತು.ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ ಹಾಗೂ ಸಿದ್ದಸಿರಿ ಸೌಹಾರ್ದ ಸಹಕಾರಿ ನಿ. ನಿರ್ದೇಶಕ ರಾಮನಗೌಡ ಪಾಟೀಲ…
ಸಪ್ತಸಾಗರ ವಾರ್ತೆ,ವಿಜಯಪುರ,ಸೆ. 10:ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ ಮಂಜೂರಿಸಲಾದ ರೂ.11 ಲಕ್ಷ ಅನುದಾನದಲ್ಲಿ ಖರೀದಿಸಲಾದ ನೂತನ ಮಹಿಂದ್ರಾ ಬೋಲೆರೋ ವಾಹನವನ್ನು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬುಧವಾರ ವಾಹನ ಸಾರಿಗೆ ವಿಭಾಗ, ಆರಕ್ಷಕ ನಿರೀಕ್ಷಕರು, ಡಿಎಆರ್ ವಿಜಯಪುರ ಅವರಿಗೆ ಕೀ ನೀಡುವ ಮೂಲಕ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿಗಳಾದ ಸುನೀಲ ಕಾಂಬ್ಳೆ, ಮುರಗೆಪ್ಪ ಉಪಾಸೆ, ಸಿಪಿಐ ಗಳಾದ ರವಿ ಯಡವಣ್ಣವರ, ರಾಯಗೊಂಡ ಜಾನವಾರ, ಪರಶುರಾಮ ಮನಗೂಳಿ, ಪಿ.ಎಸ್.ಐ ಯತಿಂದ್ರ, ಆರ್.ಪಿ.ಐ ಈರಸಂಗಪ್ಪ…
ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 6: ನಗರದಲ್ಲಿ ಗಣೇಶ ವಿಸರ್ಜನೆ ವೇಳೆ ಈಚೆಗೆ ವಿದ್ಯುತ್ ಸ್ಪರ್ಶದಿಂದ ನಡೆದ ದುರ್ಘಟನೆಯಲ್ಲಿ ಮೃತಪಟ್ಟ ಡೋಬಳೆ ಗಲ್ಲಿಯ ಯುವಕ ಶುಭಂ ಸಂಕಪಾಲ ಅವರ ಮನೆಗೆ ಹಾಗೂ ಗಾಯಗೊಂಡ ಯುವಕರ ಮನೆಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಶನಿವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ವೇಳೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು, ಗಣೇಶ ವಿಸರ್ಜನೆ ವೇಳೆ ವಿದ್ಯುತ್ ಸ್ಪರ್ಶದಿಂದ ದುರ್ಘಟನೆ ನಡೆದಿರುವುದು ಅತ್ಯಂತ ನೋವಿನ ವಿಷಯ. ಇದೊಂದು…