“ಒಣದ್ರಾಕ್ಷಿ ಹರಾಜಿಗೆ ಆನ್‌ಲೈನ್ ಟಚ್” ₹5 ಕೋಟಿಯಿಂದ ₹12 ಕೋಟಿಗೆ ವಹಿವಾಟು ಜಿಗಿತ; ಪಾರದರ್ಶಕ ಮಾರುಕಟ್ಟೆಯಿಂದ ರೈತರಿಗೆ ಲಾಭ: ಯತ್ನಾಳ

ಸಪ್ತಸಾಗರ ವಾರ್ತೆ | ವಿಜಯಪುರ, ಆ.8:ರೈತರ ಹಿತದೃಷ್ಟಿಯಿಂದ ಪಾರದರ್ಶಕ ವಹಿವಾಟಿಗೆ ಒತ್ತು ನೀಡಿರುವ ಆನ್‌ಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ವಿಜಯಪುರದ ಒಣದ್ರಾಕ್ಷಿ ವಹಿವಾಟು ವೇಗವಾಗಿ ಶಿಫ್ಟ್ ಆಗುತ್ತಿದ್ದು, ಇದರ ಪರಿಣಾಮ ವಹಿವಾಟಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಈವರೆಗೆ ಸರಾಸರಿ ₹5 ಕೋಟಿಯಷ್ಟಿದ್ದ ವಹಿವಾಟು ಇದೀಗ ₹12 ಕೋಟಿಗೆ ಏರಿಕೆಯಾಗಿದ್ದು, ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯುವ ವಾತಾವರಣ ನಿರ್ಮಾಣವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.ವಿಜಯಪುರದಲ್ಲಿ ಒಣದ್ರಾಕ್ಷಿ ಆನ್‌ಲೈನ್ ಟ್ರೇಡಿಂಗ್ ಮಾರುಕಟ್ಟೆ ಆರಂಭಗೊಂಡಿದ್ದರೂ, ಕೆಲವರು ಖಾಸಗಿ…

Read More

‘ಗೂಂಡಾ ಸರ್ಕಾರ’ ಎಂದು ಕಾಂಗ್ರೆಸ್‌ಗೆ ಯತ್ನಾಳ ಟಾಂಗ್, : ಸಚಿವ ಸಂಪುಟ ವಿಸ್ತರಣೆ ವಿರುದ್ಧ ತೀವ್ರ ವಾಗ್ದಾಳಿ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 4: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತೀವ್ರ ವಾಗ್ದಾಳಿ ನಡೆಸಿದ್ದು, ಹೊಸ ಸಚಿವರ ಪಟ್ಟಿಯನ್ನು “ಗೂಂಡಾ ಸರ್ಕಾರದ ಸಂಪುಟ” ಎಂದು ಬಣ್ಣಿಸಿದ್ದಾರೆ. ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದವರು, ಗೂಂಡಾಗಿರಿ ಪ್ರವೃತ್ತಿಯವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿರುವ ಅವರು, ನಿಷ್ಠಾವಂತ ಕಾಂಗ್ರೆಸ್ ನಾಯಕರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗಿದೆ ಎಂದು ಕಿಡಿಕಾರಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ…

Read More

ಹೈಮಾಸ್ಟ್ ಅಳವಡಿಕೆ ಕಾಮಗಾರಿಗೆ ರೂ.1 ಕೋಟಿ ಮಂಜೂರು

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 13: ನಗರ ಮತಕ್ಷೇತ್ರದಲ್ಲಿ ಬರುವ ತೊರವಿ ಗ್ರಾಮ ಪಂಚಾಯಿತಿಯಲ್ಲಿ ಅತೀ ಹೆಚ್ಚು ಪರಿಶಿಷ್ಟ ಜಾತಿ ಜನಾಂಗದವರು ವಾಸಿಸುವ ಕಾಲೊನಿಗಳಲ್ಲಿ ಹೈಮಾಸ್ಟ್ ಅಳವಡಿಸುವ ಕಾಮಗಾರಿಗೆ 2026-27ನೇ ಸಾಲಿನ ಕಾಲೊನಿ ಅಭಿವೃದ್ಧಿ/ಪ್ರಗತಿ ಕಾಲೊನಿ ಯೋಜನೆಯಡಿ ರೂ.1 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಲಾಗುವುದು.ತೊರವಿ ಗ್ರಾಮದ ಅತಾಲಟ್ಟಿ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಹತ್ತಿರ, ಎಸ್.ಸಿ ಕಾಲೊನಿಯ ಹನುಮಾನ ದೇವಸ್ಥಾನ ಹತ್ತಿರ, ಇಂದಿರಾ ನಗರದ ಝೆಂಡಾ ಕಟ್ಟಿ ಹತ್ತಿರ, ಪರಿಶಿಷ್ಟ ಜಾತಿಯ ಸ್ಮಶಾನದಲ್ಲಿ, ಹರಳಯ್ಯ ಸಮಾಜದ ಮರಗಮ್ಮ…

Read More

ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿ ರಾಜೀನಾಮೆ ಪಡೆದ ಕಾಂಗ್ರೆಸ್ ಹೈಕಮಾಂಡ್

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 28:ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಿ ಹಿಂದುಳಿದ ನಾಯಕನ ಬಲಿ ಕೊಡಲಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿಥ ಹಿನ್ನಲೆ ಅವರು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು.ಬಕ್ರೀದ್ ಹಬ್ಬದ ದಿನವೇ ಸಿದ್ದರಾಮಯ್ಯರನ್ನು ಬಲಿ ಪಡೆಯಲಾಗಿದೆ.2028 ರ ಚುನಾವಣೆಯಲ್ಲಿ ಹಿಂದುಳಿದ, ದಲಿತ ವರ್ಗಗಳು ಕಾಂಗ್ರೆಸ್ ಬಲಿ ಪಡೆಯುತ್ತವೆ. ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಮುಸ್ಲಿಂ ತುಷ್ಟೀಕರಣ ಮಾಡಿ ಅತಿರೇಕ ಮಾಡಿದ್ದರು. ಮಮತಾ ಬ್ಯಾನರ್ಜಿ ಬಳಿಕ ಸಿದ್ದರಾಮಯ್ಯ ಮುಸ್ಲಿಂ ತುಷ್ಟೀಕರಣ…

Read More

ಭೂಮಾಪಕರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಶಾಸಕ ಯತ್ನಾಳ ಒತ್ತಾಯ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 26:ಭೂ ಮಾಪಕರ ಧರಣಿಯಿಂದ ಜಮೀನು ಸರ್ವೆ ವಿವಾದಗಳು ನಿರ್ಧಾರವಾಗದೆ, ರೈತರು ಸರ್ವೇ ಆಗದ ದಾಖಲಾತಿ ಪಡೆಯದ ಕಾರಣ ಅವರಿಗೆ ಬೆಳೆ ಸಾಲ ಸಿಗುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಹಿಂದೆ ಪ್ರತಿಪಕ್ಷ ನಾಯಕರಾಗಿದ್ದಾಗ ಭೂ ಮಾಪಕರ ಪರ ಧ್ವನಿ ಎತ್ತಿದ್ದರು. ಈಗ ‘ಜಾಣ ಕಿವುಡು’ ಪ್ರದರ್ಶಿಸುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕಿಡಿಕಾರಿದ್ದಾರೆ.ಭೂಮಾಪಕರ ಧರಣಿಯಿಂದ ರೈತರಿಗೆ ಬೇಕಾದ ಅಗತ್ಯ ಸೇವೆ ಸಿಗದೇ ಪರದಾಡುತ್ತಿದ್ದು, ಇತ್ತ ಸರ್ಕಾರ ಅವರ ಸಮಸ್ಯೆಗಳನ್ನು ಆಲಿಸಲು ಯಾವುದೇ…

Read More

ಆಳಂದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್ ನಿರ್ಧಾರ :ಯತ್ನಾಳ ವಿರೋಧ

ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 22:ಗುರುವಾರ (ಮೇ 21) ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ಆಳಂದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್ ಪಡೆದಿದೆ. 2022 ರಲ್ಲಿ ಸದರಿ ದರ್ಗಾದಲ್ಲಿ ದೊಡ್ಡ ಮಟ್ಟದ ಗಲಾಟೆಯಾಗಿ, ತಿಳಿಗೇಡಿಗಳು ಶಿವಲಿಂಗದ ಮೇಲೆ ಮಲ ಮೂತ್ರ ವಿಸರ್ಜನೆ ಮಾಡಿದ್ದರು.ಆರೋಪಿತರು ‘ಅಮಾಯಕರು’ ಎಂದು ಬಿಂಬಿಸುತ್ತಿರುವ ಸರ್ಕಾರದ ಈ ನಡೆ ಸಂವಿಧಾನ ವಿರೋಧಿಯಾಗಿದೆ. ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಉದ್ದೇಶಪೂರ್ವಕವಾಗಿ ದೊಂಬಿ, ಹಿಂಸಾಚಾರ, ಕೋಮು ಗಲಭೆ, ವಿಗ್ರಹ…

Read More

ವಿದ್ಯುತ್ ಚಿತಾಗಾರ ನಿರ್ಮಾಣ: ಶಾಸಕ ಯತ್ನಾಳ ಭೂಮಿಪೂಜೆ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 20:ನಗರದ ವಾರ್ಡ್ ನಂ.8 ರಲ್ಲಿ ಬರುವ ಚಾಲುಕ್ಯ ನಗರ ಪೂರ್ವ ಭಾಗದ ದೇವಗಿರಕರ ಸ್ಮಶಾನದಲ್ಲಿ ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿ ಅಡಿಯಲ್ಲಿ ಮಂಜೂರಿಸಲಾದ ರೂ.4 ಕೋಟಿ ಅನುದಾನದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣ ಕಾಮಗಾರಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಂಗಳವಾರ ಭೂಮಿಪೂಜೆ ನೆರವೇರಿಸಿದರು.ಭೂಮಿಪೂಜೆ ಬಳಿಕ ಸಾರ್ವಜನಿಕರಿಂದ ಅಹವಾಲು ಆಲಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದಾಗಿ ಸಕರಾತ್ಮಕವಾಗಿ ಸ್ಪಂದಿಸಿದರು. ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಸದಸ್ಯರಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ಅಶೋಕ…

Read More

ಟಿಕೆಟ್ ಗಿಟ್ಟಿಸಿಕೊಳ್ಳಲು ಯತ್ನಾಳ ಹೊಸ ಪಕ್ಷದ ಬ್ಲಾಕ್ ಮೇಲ್: ಯತ್ನಾಳಗೆ ಸಚಿವ ಎಂಬಿಪಿ ಟಾಂಗ್

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 15 :ಶಾಸಕ ಯತ್ನಾಳರಿಗೆ ಬಿಜೆಪಿ ವ್ಯಾಮೋಹ ಹೋಗಿಲ್ಲ. ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳಲು ಈ ರೀತಿ ಹೊಸ ಪಕ್ಷದ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಅವರು ಹೊಸ ಪಕ್ಷ ಕಟ್ಟುವುದೇ ಇಲ್ಲ ಬಿಡಿ ಎಂದು ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ ಅವರು ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳಲು ಈ ಪ್ರಯತ್ನ ಅಲ್ಲ. ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಬೇಕಾದರೆ ಯತ್ನಾಳರು ಪಕ್ಷ ಕಟ್ಟಲಿ ಅದಕ್ಕೆ ಶುಭವಾಗಲಿ. ಅವರು ತಮಿಳುನಾಡಿನ…

Read More

ಎಲ್.ಇ.ಡಿ ದೀಪ ಅಳವಡಿಕೆ ಯೋಜನೆಯಿಂದ ಪಾಲಿಕೆ ಆರ್ಥಿಕ ಹೊರೆ ಇಳಿಕೆ: ಯತ್ನಾಳ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 7: ನಗರದಲ್ಲಿ ಹಾಲಿ ಇರುವ ಸಾಂಪ್ರದಾಯಿಕ ಬೀದಿ ದೀಪಗಳನ್ನು ಬದಲಾಯಿಸಿ ಕೇಂದ್ರಿಕೃತ ಚಾಲನೆ ಮತ್ತು ನಿರ್ವಹಣೆಯುಳ್ಳ ಇಂಧನ ಕ್ಷಮೆತೆಯ ಎಲ್.ಇ.ಡಿ ದೀಪಗಳನ್ನು ಅಳವಡಿಸುವ ಯೋಜನೆ ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಜಯಪುರ ನಗರದ ಸುಮಾರು 36.36 ಕೋಟಿ ಮೊತ್ತದ ಎಲ್.ಇ.ಡಿ ದೀಪಗಳ ಅಳವಡಿಕೆ ಯೋಜನೆ ಅನುಷ್ಠಾನಗೊಳಿಸಲು ಅನುಮೋದಿಸಿರುವುದಾಗಿ ಗುರುವಾರ ವಿಧಾನಸೌಧದಲ್ಲಿ ಜರುಗಿದ ಅರ್ಜಿಗಳ ಸಮಿತಿ ಸಭೆಗೆ ಹಾಜರಿದ್ದ…

Read More

ಯತ್ನಾಳ ಹೊಸ ಪಕ್ಷ ಸ್ಥಾಪನೆ ಇಂಗಿತ: ಬಿಜೆಪಿಯಲ್ಲಿ ಬೇಗುದಿ

ರುದ್ರಪ್ಪ ಆಸಂಗಿಸಪ್ತಸಾಗರ ವಾರ್ತೆ,ವಿಜಯಪುರ, ಏ. 20:ಬಿಜೆಪಿ ಉಚ್ಚಾಟಿತ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೊಸ ರಾಜಕೀಯ ಪಕ್ಷ ಹುಟ್ಟು ಹಾಕುವುದಾಗಿ ಇಂಗಿತ ವ್ಯಕ್ತ ಪಡಿಸಿದ್ದಾರೆ.ಈ ಹಿಂದೆಯೂ ಹೊಸ ಪಕ್ಷ ಕಟ್ಟುವುದಾಗಿಯೂ ಹೇಳಿದ್ದರು. ಇದೀಗ ಮತ್ತೆ ಹೊಸ ಪಕ್ಷ ಹುಟ್ಟು ಹಾಕುವ ಮನದ ಇಂಗಿತನ್ನು ಬಿಚ್ಚಿಟ್ಟಿದ್ದಾರೆ.ಬಸವ ಜಯಂತಿ ಆಚರಣೆ ಶುಭ ಸಂದರ್ಭದಲ್ಲಿ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಯತ್ನಾಳ ಅವರು ಹೊಸ ಪಕ್ಷ ಕಟ್ಟುವ ವಿಚಾರ ಬಹಿರಂಗ ಪಡಿಸಿದ್ದಾರೆ.ಯತ್ನಾಳ ಈ ಬಾರಿ ನೂತನ ಪಕ್ಷ ಕಟ್ಟುವ…

Read More