ಸಹಕಾರ ವಲಯವು ಆರ್ಥಿಕ ವ್ಯವಸ್ಥೆಯ ಅಮೂಲ್ಯ ಕೊಂಡಿ: ಎಸ್.ಆರ್. ಪಾಟೀಲ

ಸಪ್ತಸಾಗರ ವಾರ್ತೆ, ಬಾಗಲಕೋಟೆ, ಆ. 10:ಸಹಕಾರ ವಲಯವು ನಮ್ಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿಯೇ ಒಂದು ಅಮೂಲ್ಯ ಕೊಂಡಿಯಾಗಿದೆ. ಜನತೆಗೆ ಸಾಲ, ಉಳಿತಾಯ, ವಿಮೆ, ಕೌಟುಂಬಿಕ ಬೆಂಬಲ ಇವೆಲ್ಲವನ್ನೂ ಸಮರ್ಥವಾಗಿ ನೀಡುತ್ತಿರುವುದು ಸಹಕಾರ ಸಂಘಗಳ ಮಹತ್ವವನ್ನು ಪ್ರತಿಪಾದಿಸುತ್ತದೆ. ಈ ಹಿನ್ನೆಲೆಯಲ್ಲಿ, ಸೌಹಾರ್ದ ಸಹಕಾರ ಸಂಘಗಳು ನಂಬಿಕೆ ಮತ್ತು ಯಶಸ್ಸಿನ ನಿದರ್ಶನವಾಗಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ್ ಹೇಳಿದರು.ನವನಗರದ ಸೆಕ್ಟರ್ ನಂ.25ರಲ್ಲಿ ನೂತನ ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಬಾಗಲಕೋಟೆ ಇದರ ಉದ್ಘಾಟನಾ ಸಮಾರಂಭ…

Read More

ಶ್ರೀ ಸಿದ್ದೇಶ್ವರ ಅನ್ನ ದಾಸೋಹ ಸೇವೆಗೆ ಚಾಲನೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 4: ನಗರದ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀ ಸಿದ್ದೇಶ್ವರ ಸಂಸ್ಥೆಯ ಶಿವಾನುಭವ ಮಂಟಪದಲ್ಲಿ ನಿತ್ಯ ನಡೆಯಲಿರುವ ಶ್ರೀ ಸಿದ್ದೇಶ್ವರ ಅನ್ನ ದಾಸೋಹ ಸೇವೆಗೆ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸೋಮವಾರ ಪೂಜೆ ಸಲ್ಲಿಸಿ, ಚಾಲನೆ ನೀಡಿದರು.ಶ್ರೀ ಸಿದ್ದೇಶ್ವರ ದೇವಸ್ಥಾನಕ್ಕೆ ಪರ ಸ್ಥಳದಿಂದ ಬಂದಂತ ಭಕ್ತಾಧಿಗಳಿಗೆ, ಪ್ರವಾಸಿಗರಿಗೆ, ರುದ್ರಾಭಿಷೇಕ ಮಾಡಿಸುವ ಭಕ್ತಾಧಿಗಳಿಗೆ ನಿತ್ಯ ದಾಸೋಹ ಸೇವೆ ಕಲ್ಪಿಸಲಾಗುತ್ತದೆ. ಪ್ರಾರಂಭೋತ್ಸವ ದಿನದ ದಾಸೋಹ…

Read More

ಫೋಟೋಗ್ರಾಫರ್ಸ್ ಅಕಾಡೆಮಿ ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ: ಸಚಿವ ಎಂ.ಬಿ. ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 26:ಛಾಯಾಗ್ರಾಹಕರ ಬೇಡಿಕೆಗಳಿಗೆ ಸರಕಾರ ಸ್ಪಂದಿಸಲಿದೆ ಎಂದು ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ಼್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ನಗರದಲ್ಲಿ ಕರ್ನಾಟಕ ಛಾಯಾಗ್ರಾಹಕರ ಸಂಘ ಜಿಲ್ಲಾ ಘಟಕ‌ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಹಾಗೂ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ‌ ತಂತ್ರಜ್ಞಾನ‌ ಯುಗದಲ್ಲಿ ಛಾಯಾಗ್ರಾಹಕರಿಗೂ ಅನೇಕ‌ ಸವಾಲುಗಳಿದ್ದು, ಆರ್ಟಿಫಿಶಿಯಲ್ ಇಂಟಲಿಜನ್ಸ್ ಮತ್ತು ಡಿಜಿಟಲ್ ತಂತ್ರಜ್ಞಾನಕ್ಕೆ ಬದಲಾವಣೆಗೆ ತಕ್ಕಂತೆ ವೃತ್ತಿಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು. ಹಿಂದಿನ ದಿನಗಳಲ್ಲಿ ನಮ್ಮ ಹಿರಿಯ ಛಾಯಾಗ್ರಾಹಕರಿಗೆ…

Read More

ಶಾಸಕ ಕಾಶಪ್ಪನವರಿಗೆ ಅಂತ್ಯಕಾಲ ಬಂದಿದೆ- ಯತ್ನಾಳ ಕಿಡಿ

ಸಪ್ತಸಾಗರ ವಾರ್ತೆ ವಿಜಯಪುರ, ಜು.21:ಶಾಸಕ ವಿಜಯಾನಂದ ಕಾಶಪ್ಪನವರಿಗೆ ಅಂತ್ಯ ಕಾಲ ಬಂದಿದೆ. ಆರುವ ಮುನ್ನ ದೀಪ ಉರಿಯುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಿಡಿ ಕಾರಿದ್ದಾರೆ.ವಿಜಯಾನಂದ ಕಾಶಪ್ಪನವರ ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿರುವ ವಿಚಾರವಾಗಿ ಸೋಮವಾರ ಸುದ್ದಿಗಾರರ ಜೊತೆಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿ ಕಾಶಪ್ಪನವರ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು.ಇಡೀ ಸಮಾಜ ಕಾಶಪ್ಪನವರ ಬೆನ್ನಿಗಿಲ್ಲ. ಕಾಶಪ್ಪನವರ ಪೂಜ್ಯರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು.ಕೂಡಲಸಂಗಮ ಸ್ವಾಮೀಜಿ ಸಮಾಜದ ಪರ ಹಾಗೂ 2ಎ ಮೀಸಲಾತಿಗಾಗಿ…

Read More

ಸಿಎಂ ಸಿದ್ದರಾಮಯ್ಯ ರಾಜ್ಯವನ್ನು ಸಾಲದ ಸುಳಿಗೆ ನೂಕಿದ್ದಾರೆ- ಯತ್ನಾಳ್ ಕಿಡಿ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 16: ಸಾರಿಗೆ ಸಂಸ್ಥೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಬೇಕಾಗಿದ್ದ ಸರ್ಕಾರವು ತನ್ನ ವೋಟ್ ಬ್ಯಾಂಕ್ ರಾಜಕಾರಣಕ್ಕೆ ನಷ್ಟಕ್ಕೆ ನೂಕಿದೆ. ಭವಿಷ್ಯ ನಿಧಿ (ಪಿ.ಎಫ್) ಪಾವತಿ ಮಾಡುವುದಕ್ಕೂ ಹಣವಿಲ್ಲದೆ ಈಗ ಅದಕ್ಕೂ ಸಾಲ ಮಾಡಲು ನಿರ್ಧರಿಸಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದ್ದಾರೆ.ಎರಡು ದಿನಗಳ ಹಿಂದೆಯಷ್ಟೇ ‘ಶಕ್ತಿ’ ಯೋಜನೆಯ ಬಗ್ಗೆ ಸರ್ಕಾರ ಎಲ್ಲಾ ಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಯೋಜನೆಯ ಯಶಸ್ಸಿನ ಬಗ್ಗೆ ಜಾಹೀರಾತು ನೀಡಿತ್ತು. ಸಾರಿಗೆ ನೌಕರರಿಗೆ 38 ತಿಂಗಳ ಭತ್ಯೆ ಮತ್ತು ವೇತನ ಹೆಚ್ಚಳ…

Read More

ಮಹಾನಗರ ಪಾಲಿಕೆ ನೌಕರರ ಧರಣಿ ಸ್ಥಳಕ್ಕೆ ಶಾಸಕ ಯತ್ನಾಳ ಭೇಟಿ:ಬೇಡಿಕೆ ಈಡೇರಿಸಲು ಗಟ್ಟಿಯಾಗಿ ನಿಲ್ಲುವ ಭರವಸೆ

ಸಪ್ತಸಾಗರ ವಾರ್ತೆ,ವಿಜಯಪುರ, ಜು. 12:ಮಹಾನಗರ ಪಾಲಿಕೆ ನೌಕರರು ಸೇರಿದಂತೆ ಸ್ಥಳೀಯ ಸಂಸ್ಥೆಗಳ ನೌಕರರ ನ್ಯಾಯಯುತ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸಲು ತಮ್ಮೊಂದಿಗೆ ಗಟ್ಟಿಯಾಗಿ ನಿಲ್ಲುವುದಾಗಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ಅಭಯ ನೀಡಿದರು.ವಿಜಯಪುರ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿಜಯಪುರ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಕಳೆದ 5 ದಿನಗಳಿಂದ ನಡೆಯುತ್ತಿರುವ ಧರಣೆ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು.ರಾಜ್ಯದ…

Read More

ಕಾಂಗ್ರೆಸಿನಲ್ಲಿ ಸಿಎಂ ಕುರ್ಚಿಗೆ ವ್ಯಾಪಾರ ನಡೆದಿದೆ- ಯತ್ನಾಳ್ ಆರೋಪ

ಸಪ್ತಸಾಗರ ವಾರ್ತೆ ವಿಜಯಪುರ, ಜು. 12ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ವ್ಯಾಪಾರ (ಆಕ್ಷನ್) ನಡೆದಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆರೋಪಿಸಿದರು.ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ದೆಹಲಿಯಲ್ಲಿ ಕುಳಿತಿದ್ದಾರೆ ಎಂದು ಟೀಕಿಸಿದರು.ಡಿಕೆಶಿ ಹಾಗೂ ಸಿದ್ದರಾಮಯ್ಯ ಸಿಎಂ ಕುರ್ಚಿಗಾಗಿ ಎಷ್ಟು ಕೋಟಿ ಕೊಡುತ್ತಾರೆ. ಮೂರನೇ ವ್ಯಕ್ತಿ ಎಷ್ಟು ಕೋಟಿ ಕೊಡುಬಹುದು ಎನ್ನುವ ವ್ಯಾಪಾರ (ಆಕ್ಷನ್) ನಡೆದಿದೆ ಎಂದು ಛೇಡಿಸಿದರು.ದೇಶದಲ್ಲಿ ಎಲ್ಲಿಯೂ ಕಾಂಗ್ರೆಸ್ ಆಧಿಕಾರದಲ್ಲಿ ಇಲ್ಲ. ಕಾಂಗ್ರೆಸ್…

Read More