
ಬಸವ ಸಂಸ್ಕೃತಿ ಅಭಿಯಾನಕ್ಕೆ ಕ್ಷಣ ಗಣನೆ: ಅಂತಿಮ ಸಿದ್ಧತೆ ಪರಿಶೀಲಿಸಿದ ಸಚಿವ ಶಿವಾನಂದ ಪಾಟೀಲ
ಸಪ್ತಸಾಗರ ವಾರ್ತೆ, ಬಸವನ ಬಾಗೇವಾಡಿ, ಆ. 31:ಬಸವಜನ್ಮಭೂಮಿ ಬಸವನ ಬಾಗೇವಾಡಿ ಪಟ್ಟಣದಿಂದ ಚಾಲನೆ ಪಡೆಯಲಿರುವ ಬಸವ ಸಂಸ್ಕೃತಿ ಅಭಿಯಾನಕ್ಕೆ ಕ್ಷಣ ಗಣನೆ ಆರಂಭಗೊಂಡಿದೆ. ಸೋಮವಾರ ಸೆ.1ರಂದು ಅಭಿಯಾನಕ್ಕೆ ಚಾಲನೆ ಪಡೆಯಲಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರೂ ಆಗಿರುವ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಅಂತಿಮ ಸಿದ್ಧತೆ ಪರಿಶೀಲಿಸಿದರು.ಭಾನುವಾರ ಮಧ್ಯಾಹ್ನ ಪಟ್ಟಣದ ಸಿಬಿಎಸ್ ಶಾಲಾ ಆವರಣದಲ್ಲಿ ಅಭಿಯಾನ ವೇದಿಕೆ ಹಾಗೂ ಪ್ರಸಾದ ವ್ಯವಸ್ಥೆಯ ಅಂತಿಮ ಸಿದ್ಧತೆ ಪರಿಶೀಲಿಸಿದ ಸಚಿವರು, ಸಲಹೆ,…