
ಶಾಸಕ ಕಾಶಪ್ಪನವರಿಗೆ ಅಂತ್ಯಕಾಲ ಬಂದಿದೆ- ಯತ್ನಾಳ ಕಿಡಿ
ಸಪ್ತಸಾಗರ ವಾರ್ತೆ ವಿಜಯಪುರ, ಜು.21:ಶಾಸಕ ವಿಜಯಾನಂದ ಕಾಶಪ್ಪನವರಿಗೆ ಅಂತ್ಯ ಕಾಲ ಬಂದಿದೆ. ಆರುವ ಮುನ್ನ ದೀಪ ಉರಿಯುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಿಡಿ ಕಾರಿದ್ದಾರೆ.ವಿಜಯಾನಂದ ಕಾಶಪ್ಪನವರ ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿರುವ ವಿಚಾರವಾಗಿ ಸೋಮವಾರ ಸುದ್ದಿಗಾರರ ಜೊತೆಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿ ಕಾಶಪ್ಪನವರ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು.ಇಡೀ ಸಮಾಜ ಕಾಶಪ್ಪನವರ ಬೆನ್ನಿಗಿಲ್ಲ. ಕಾಶಪ್ಪನವರ ಪೂಜ್ಯರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು.ಕೂಡಲಸಂಗಮ ಸ್ವಾಮೀಜಿ ಸಮಾಜದ ಪರ ಹಾಗೂ 2ಎ ಮೀಸಲಾತಿಗಾಗಿ…