ಬಸವನಬಾಗೇವಾಡಿ ಸಮೀಪ 3.5 ತೀವ್ರತೆಯ ಭೂಕಂಪ
ಸಪ್ತಸಾಗರ ವಾರ್ತೆ,ವಿಜಯಪುರ, ಸೆ.30:ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಸಮೀಪ ಬುಧವಾರ ಮುಂಜಾನೆ 2.04ಕ್ಕೆ 3.5 ತೀವ್ರತೆಯ ಭೂಕಂಪ ಸಂಭವಿಸಿದೆ.ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (KSNDMC) ಪ್ರಕಾರ, ಬಸವನಬಾಗೇವಾಡಿಯಿಂದ 3.9 ಕಿ.ಮೀ. ಈಶಾನ್ಯ ಭಾಗದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ. 10 ಕಿ.ಮೀ. ಆಳದಲ್ಲಿ ಸಂಭವಿಸಿದ ಭೂಕಂಪದ ಕೇಂದ್ರದ ಅಕ್ಷಾಂಶ 16.604° ಉತ್ತರ ಹಾಗೂ ರೇಖಾಂಶ 75.990° ಪೂರ್ವವಾಗಿದೆ.ಕೇಂದ್ರಬಿಂದುವಿನಿಂದ ಹುಣಶ್ಯಾಳ ಗ್ರಾಮ ಪಂಚಾಯಿತಿ 7.8 ಕಿ.ಮೀ., ಹೂವಿನ ಹಿಪ್ಪರಗಿ ಗ್ರಾಮ ಪಂಚಾಯಿತಿ 11.2 ಕಿ.ಮೀ., ಆಲಮಟ್ಟಿ ಅಣೆಕಟ್ಟು 31…


