
ವಿಜಯಪುರ ತಾಲೂಕು ರೈತ ಸಂಘದ ನೂತನ ಪದಾಧಿಕಾರಿಗಳ ನೇಮಕ
ಸಪ್ತಸಾಗರ ವಾರ್ತೆ ವಿಜಯಪುರ, ಆ. 30: ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘದ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಮಹಾದೇವಪ್ಪ ತೇಲಿ (ಅಧ್ಯಕ್ಷ), ಜಯಸಿಂಗ್ ರಜಪೂತ ( ಪ್ರಧಾನ ಕಾರ್ಯದರ್ಶಿ) ಪ್ರಭುಲಿಂಗ ಕಾರಜೋಳ ( ಯುವ ಘಟಕ ಅಧ್ಯಕ್ಷ) ಅವರನ್ನು ಬೆಳಗಾವಿ ವಿಭಾಗದ ಉಪಾಧ್ಯಕ್ಷ ಬಸನಗೌಡ ಧರ್ಮಗೊಂಡ ಹಾಗೂ ರಾಜ್ಯ ಯುವ ಘಟಕದ ಸಂಚಾಲಕ ಸಿದ್ಧನಗೌಡ ಪಾಟೀಲ ಅವರು ಎಲ್ಲ ಪದಾಧಿಕಾರಿಗಳ ಸಮಕ್ಷಮದಲ್ಲಿ ಒಮ್ಮತದಿಂದ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.