ವಿಷ್ಣು ಸಹಸ್ರನಾಮ ಭವನದಲ್ಲಿ ಅಷ್ಟಮ ನವರಾತ್ರಿ ಮಹೋತ್ಸವ ಆರಂಭ
ಸಪ್ತಸಾಗರ ವಾರ್ತೆ,ವಿಜಯಪುರ, ಅ.11:ನಗರದ ತೊರವಿ ರಸ್ತೆಯ ನಿಂಬರಗಿ ಬಡಾವಣೆಯಲ್ಲಿರುವ ಶ್ರೀ ವಿಷ್ಣು ಸಹಸ್ರನಾಮ ಭವನದಲ್ಲಿ ಶ್ರೀ ವೆಂಕಟೇಶ್ವರ ದೇವರ ಅಷ್ಟಮ ನವರಾತ್ರಿ ಮಹೋತ್ಸವವು ಶ್ರದ್ಧಾ-ಭಕ್ತಿಯಿಂದ ಆರಂಭಗೊಂಡಿತು.ಉತ್ತರಾಧಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾದ ನೇಪಾಳದ ಗಂಡಕಿ ನದಿಯ ಸಾಲಿಗ್ರಾಮದಿಂದ ನಿರ್ಮಿಸಲಾದ ಸುಮಾರು 6 ಅಡಿ ಎತ್ತರದ ಶ್ರೀ ವೆಂಕಟೇಶ್ವರ ದೇವರ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.ಶ್ರೀ ವ್ಯಾಸಮಧ್ವ ಸಂಸ್ಕೃತ ವಿದ್ಯಾಲಯ ಟ್ರಸ್ಟ್ ಕುಟುಂಬದ ನೇತೃತ್ವದಲ್ಲಿ ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಪ್ರತಿದಿನ…


